ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

29ರಂದು ‘ನಿರ್ದಿಷ್ಟ ದಾಳಿ ದಿನ’ ಆಚರಿಸಲು ಯುಜಿಸಿ ನಿರ್ದೇಶನ

ದೇಶದ ವಿಶ್ವವಿದ್ಯಾಲಯಗಳಿಗೆ, ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಪತ್ರ
Last Updated 20 ಸೆಪ್ಟೆಂಬರ್ 2018, 20:09 IST
ಅಕ್ಷರ ಗಾತ್ರ

ನವದೆಹಲಿ: ಸೆಪ್ಟಂಬರ್‌ 29ರಂದು ‘ನಿರ್ದಿಷ್ಟ ದಾಳಿ ದಿನ’ ಆಚರಿಸುವಂತೆ ವಿಶ್ವವಿದ್ಯಾಲಯ ಅನುದಾನ ಆಯೋಗವು (ಯುಜಿಸಿ) ದೇಶದ ಎಲ್ಲ ವಿಶ್ವವಿದ್ಯಾಲಯಗಳು ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಪತ್ರ ಮೂಲಕಗುರುವಾರ ನಿರ್ದೇಶನ ನೀಡಿದೆ.

ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಪ್ರದೇಶದಲ್ಲಿ 2016ರ ಸೆಪ್ಟೆಂಬರ್‌ 29ರಂದು ಭಾರತೀಯ ಯೋಧರು ನಿರ್ದಿಷ್ಟ ದಾಳಿ ನಡೆಸಿ ಉಗ್ರರ ತಾಣಗಳನ್ನು ನಾಶಪಡಿಸಿದ್ದರು. ಇದರ ಸ್ಮರಣಾರ್ಥವಾಗಿ ಈ ಕಾರ್ಯಕ್ರಮ ಆಯೋಜಿಸುವಂತೆ ಯುಜಿಸಿ ಹೇಳಿದೆ.

ಭದ್ರತಾ ಪಡೆಗಳ ತ್ಯಾಗಮನೋಭಾವದ ಬಗ್ಗೆ ಮಾಜಿ ಸೈನಿಕರಿಂದ ಉಪನ್ಯಾಸ ಕಾರ್ಯಕ್ರಮ, ಎನ್‌ಸಿಸಿ ವಿದ್ಯಾರ್ಥಿಗಳ ವಿಶೇಷ ಪರೇಡ್‌ ಆಯೋಜಿಸಬೇಕು. ಭದ್ರತಾ ಪಡೆಗಳಿಗೆ ಶುಭಾಶಯ ಕೋರುವ ಪತ್ರಗಳನ್ನು ಕಳುಹಿಸಬೇಕು ಎಂದು ಯುಜಿಸಿ ಸೂಚಿಸಿದೆ.

ದೆಹಲಿಯ ಇಂಡಿಯಾ ಗೇಟ್‌ ಬಳಿ ಅಂದು ಮಲ್ಟಿಮೀಡಿಯಾ ಪ್ರದರ್ಶನ ಆಯೋಜಿಸಲಾಗಿದೆ. ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು, ಪ್ರಮುಖ ನಗರಗಳು ಮತ್ತು ದಂಡು ಪ್ರದೇಶಗಳಲ್ಲಿ (ಕಂಟೋನ್ಮೆಂಟ್‌)ಇದೇ ರೀತಿಯ ಕಾರ್ಯಕ್ರಮ ಆಯೋಜಿಸಬೇಕು. ಈ ಸ್ಥಳಗಳಿಗೆ ಭೇಟಿ ನೀಡುವಂತೆ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಯನ್ನು ಸಂಸ್ಥೆಗಳು ಉತ್ತೇಜಿಸಬೇಕು ಎಂದೂ ಯುಜಿಸಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT