ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಉಕ್ರೇನ್‌ ಯುದ್ಧ: ‘ವಂದೆ ಭಾರತ್’ ರೈಲು ನಿರ್ಮಾಣಕ್ಕೆ ಹಿನ್ನಡೆ

Last Updated 28 ಏಪ್ರಿಲ್ 2022, 16:06 IST
ಅಕ್ಷರ ಗಾತ್ರ

ನವದೆಹಲಿ: ಉಕ್ರೇನ್‌–ರಷ್ಯಾ ಯುದ್ಧದಿಂದಾಗಿ ಹೊಸ ‘ವಂದೇ ಭಾರತ್’ ರೈಲುಗಳ ನಿರ್ಮಾಣಕ್ಕೆ ಹಿನ್ನಡೆ ಉಂಟಾಗಿದೆ.

‘ವಂದೆ ಭಾರತ್ ರೈಲುಗಳ ನಿರ್ಮಾಣಕ್ಕೆ ಅಗತ್ಯವಿರುವ ಕೆಲ ಭಾಗಗಳನ್ನು ಉಕ್ರೇನ್‌ನಲ್ಲಿ ಉತ್ಪಾದಿಸಲಾಗುತ್ತಿದ್ದು, ಯುದ್ಧದಿಂದಾಗಿ ಇವುಗಳ ಆಮದು ಸ್ಥಗಿತಗೊಂಡಿದೆ. ಈ ಭಾಗಗಳು ಸಕಾಲದಲ್ಲಿ ತಲುಪುವಂತಾಗಲು ಪರ್ಯಾಯ ವ್ಯವಸ್ಥೆಯ ಹುಡುಕಾಟ ನಡೆಯುತ್ತಿದೆ’ ಎಂದು ವಿದೇಶಾಂಗ ಸಚಿವಾಲಯ ವಕ್ತಾರ ಅರಿಂದಮ್ ಬಾಗ್ಚಿ ಗುರುವಾರ ಹೇಳಿದ್ದಾರೆ.

36,000 ಗಾಲಿಗಳನ್ನು (₹ 122 ಕೋಟಿ ವೆಚ್ಚ) ಪೂರೈಸುವಂತೆ ಭಾರತೀಯ ರೈಲ್ವೆಯು ಉಕ್ರೇನ್‌ನ ಕಂಪನಿಯೊಂದಕ್ಕೆ ಬೇಡಿಕೆ ಸಲ್ಲಿಸಿದೆ. ಈ ಗಾಲಿಗಳನ್ನು ಹೊತ್ತ ಹಡುಗು ಉಕ್ರೇನ್‌ನಿಂದ ಮುಂಬೈನ ಜವಾಹರಲಾಲ್‌ ನೆಹರೂ ಬಂದರಿಗೆ ಬರಬೇಕಿತ್ತು. ಯುದ್ಧದಿಂದಾಗಿ ಇದು ಸಾಧ್ಯವಾಗಿಲ್ಲ ಎಂದು ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT