ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಏಕೀಕೃತ ಪಿಂಚಣಿ ವ್ಯವಸ್ಥೆ | ಯೂಟರ್ನ್‌ ಸರ್ಕಾರ: ಕಾಂಗ್ರೆಸ್ ವಾಗ್ದಾಳಿ

ಖರ್ಗೆ ಟೀಕೆ
Published 25 ಆಗಸ್ಟ್ 2024, 23:30 IST
Last Updated 25 ಆಗಸ್ಟ್ 2024, 23:30 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರ ಸರ್ಕಾರ ಏಕೀಕೃತ ಪಿಂಚಣಿ ವ್ಯವಸ್ಥೆಯನ್ನು →(ಯುಪಿಎಸ್) →ಜಾರಿಗೆ ತರುವುದಾಗಿ ಘೋಷಿಸಿರುವ ವಿಚಾರವಾಗಿ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಪಕ್ಷವು, ಯುಪಿಎಸ್‌ನಲ್ಲಿ ಇರುವ ‘ಯು’ ಅಕ್ಷರ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ‘ಯೂಟರ್ನ್‌’ ನಿಲುವನ್ನು ಪ್ರತಿನಿಧಿ ಸುತ್ತಿದೆ ಎಂದು ಹೇಳಿದೆ.

ಯುಪಿಎಸ್ ವ್ಯವಸ್ಥೆಯನ್ನು ಜಾರಿಗೆ ತರಲು ಕೇಂದ್ರ ಸಚಿವ ಸಂಪುಟವು ಶನಿವಾರ ಅನುಮೋದನೆ ನೀಡಿದೆ. ‘ಜೂನ್‌ 4ರ ನಂತರದಲ್ಲಿ ಪ್ರಧಾನ ಮಂತ್ರಿಯವರ ಅಧಿಕಾರದ ಸೊಕ್ಕಿನ ಜಾಗದಲ್ಲಿ ಜನರ ಅಧಿಕಾರವು ಪಾರಮ್ಯ ಸಾಧಿಸಿದೆ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

‘ದೀರ್ಘಾವಧಿ ಬಂಡವಾಳ ವೃದ್ಧಿ ಮತ್ತು ಇಂಡೆಕ್ಸೇಷನ್ ವಿಚಾರವಾಗಿ ಬಜೆಟ್‌ನಲ್ಲಿ ಘೋಷಿಸಿದ್ದನ್ನು ಹಿಂಪಡೆಯ ಲಾಯಿತು. ವಕ್ಫ್ ಮಸೂದೆಯನ್ನು ಜೆಪಿಸಿ ಪರಿಶೀಲನೆಗೆ ಕಳುಹಿಸಲಾಯಿತು. ಪ್ರಸಾರ ಮಸೂದೆಯನ್ನು ಹಿಂಪಡೆಯಲಾಯಿತು. ಲ್ಯಾಟರಲ್ ಎಂಟ್ರಿ ಪ್ರಸ್ತಾವನೆಯನ್ನೂ ಹಿಂದಕ್ಕೆ ಪಡೆಯಲಾಯಿತು’ ಎಂದು ಖರ್ಗೆ ಅವರು ಹೇಳಿದ್ದಾರೆ. ‘ದಬ್ಬಾಳಿಕೆಯ ಮನೋಭಾವದ ಈ ಸರ್ಕಾರದಿಂದ 140 ಕೋಟಿ ಭಾರತೀಯರನ್ನು ರಕ್ಷಿಸುವ ಕೆಲಸವನ್ನು ಮತ್ತು ಉತ್ತರದಾಯಿತ್ವ ಇರುವಂತೆ ನೋಡಿಕೊಳ್ಳುವ ಕೆಲಸವನ್ನು ನಾವು ಮಾಡುತ್ತಿರುತ್ತೇವೆ’ ಎಂದು ಖರ್ಗೆ ಅವರು ‘ಎಕ್ಸ್‌’ನಲ್ಲಿ ಬರೆದಿದ್ದಾರೆ.

ಬಿಜೆಪಿ ತಿರುಗೇಟು: ಬಿಜೆಪಿಯು ‘ಯು–ಟರ್ನ್‌’ ಹೊಡೆದಿದೆ’ ಎಂದು ಲೇವಡಿ ಮಾಡಿರುವ ಕಾಂಗ್ರೆಸ್‌ಗೆ ತಿರುಗೇಟು ನೀಡಿದ ಬಿಜೆಪಿ ವಕ್ತಾರ ರವಿಶಂಕರ್‌ ಪ್ರಸಾದ್‌, ‘ಒಪಿಎಸ್ ಜಾರಿ ಕುರಿತು ವಿಧಾನಸಭೆ ಚುನಾವಣೆ ವೇಳೆ ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್‌ ಭರವಸೆ ನೀಡಿತ್ತು. ಈ ಯೋಜನೆ ಅಲ್ಲಿ ಜಾರಿಯಾಗಿದೆಯೇ ಎಂಬ ಕುರಿತು ನಾನು ರಾಹುಲ್‌ ಗಾಂಧಿ ಹಾಗೂ ಅವರ ಸರ್ಕಾರಕ್ಕೆ ಪ್ರಶ್ನೆ ಕೇಳಬಯಸುತ್ತೇನೆ. ಹಳೆ ಪಿಂಚಣಿ ಯೋಜನೆ ಕುರಿತು ಕಾಂಗ್ರೆಸ್‌ ಭಾರಿ ಕಾಳಜಿ ವ್ಯಕ್ತಪಡಿಸುತ್ತದೆ. ಆದರೆ, ಇದನ್ನು ತಮ್ಮ ಪ್ರಣಾಳಿಕೆಯಲ್ಲಿ ಅಳವಡಿಸುವ ಧೈರ್ಯ ಮಾತ್ರ ತೋರಲಿಲ್ಲ’ ಎಂದರು.

‘ದೇಶದಲ್ಲಿ ಕಡಿಮೆ ಆಗುತ್ತಿರುವ ವಾಸ್ತವ ವರಮಾನ’

ನವದೆಹಲಿ (ಪಿಟಿಐ): ವೇತನ ಏರಿಕೆಯು ನಿಧಾನಗತಿಯಲ್ಲಿರುವುದು ಹಾಗೂ ಹಣದುಬ್ಬರ ಏರಿಕೆಯ ಪ್ರಮಾಣವು ತೀವ್ರವಾಗಿರುವ ಪರಿಣಾಮವಾಗಿ ಜನರ ‘ವಾಸ್ತವ ವರಮಾನ’ವು (ಹಣದುಬ್ಬರ ಏರಿಕೆಗೆ ಹೊಂದಿಸಿದ ನಂತರದ ವರಮಾನ) ಹಿಂದೆಂದೂ ಕಾಣದ ರೀತಿಯಲ್ಲಿ ಕಡಿಮೆ ಆಗಿದೆ ಎಂದು ಕಾಂಗ್ರೆಸ್ ಭಾನುವಾರ ದೂರಿದೆ.

ನಾಣ್ನುಡಿಗಳಲ್ಲಿ ಬರುವ ಆಸ್ಟ್ರಿಚ್ ಪಕ್ಷಿಯ ಧೋರಣೆಯಂತೆ, ಸರ್ಕಾರವು ಸಮಸ್ಯೆಯನ್ನು ಎದುರಿಸುವ ಬದಲು, ದೇಶದ ಅರ್ಥವ್ಯವಸ್ಥೆ ಎದುರಿಸುತ್ತಿರುವ ಅತ್ಯಂತ ಮೂಲಭೂತ ಸಮಸ್ಯೆಯ ವಿಚಾರವಾಗಿ ಕಣ್ಣುಮುಚ್ಚಿ ಕುಳಿತಿದೆ ಎಂದು ಕಾಂಗ್ರೆಸ್ ಪಕ್ಷ ಆಕ್ರೋಶ ವ್ಯಕ್ತಪಡಿಸಿದೆ.

ಭಾರತದಲ್ಲಿ ಕುಟುಂಬಗಳ ವಾಸ್ತವ ವರಮಾನವು ನಿರಂತರವಾಗಿ ಇಳಿಕೆಯಾಗುತ್ತಿದೆ ಎಂಬ ಸತ್ಯದ ಮೇಲೆ ಹೆಸರಾಂತ ಬ್ರೋಕರೇಜ್ ಸಂಸ್ಥೆಯೊಂದರ ವರದಿಯು ಬೆಳಕು ಚೆಲ್ಲುವ ಕೆಲಸ ಮಾಡಿದೆ. ಆದರೆ, ಈ ಸತ್ಯವನ್ನು ನಿರಾಕರಿಸುವ ಕೆಲಸವನ್ನು ಕೇಂದ್ರ ನಿರಂತರವಾಗಿ ಮಾಡಿಕೊಂಡು ಬಂದಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT