ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೃಥ್ವಿ ಯೋಜನೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ

Published 5 ಜನವರಿ 2024, 15:39 IST
Last Updated 5 ಜನವರಿ 2024, 15:39 IST
ಅಕ್ಷರ ಗಾತ್ರ

ನವದೆಹಲಿ: ಈಗಾಗಲೇ ಜಾರಿಯಲ್ಲಿ ಇರುವ ಐದು ಉಪಯೋಜನೆಗಳನ್ನು ಒಳಗೊಳ್ಳುವ ‘ಪೃಥ್ವಿ ವಿಜ್ಞಾನ’ ಹೆಸರಿನ ಸಮಗ್ರ ಯೋಜನೆಯೊಂದಕ್ಕೆ ಕೇಂದ್ರ ಸಚಿವ ಸಂಪುಟವು ಶುಕ್ರವಾರ ಅನುಮೋದನೆ ನೀಡಿದೆ. ಈ ಯೋಜನೆಗೆ 2021ರಿಂದ ಅನ್ವಯವಾಗುವಂತೆ 2026ರವರೆಗೆ ₹4,797 ಕೋಟಿ ವೆಚ್ಚವಾಗಲಿದೆ.

ಉಪ ಯೋಜನೆಗಳನ್ನು ಒಂದುಗೂಡಿಸಲು ಭೂವಿಜ್ಞಾನ ಸಚಿವಾಲಯ ಮುಂದಿರಿಸಿದ ಪ್ರಸ್ತಾವಕ್ಕೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯು ಒಪ್ಪಿಗೆ ನೀಡಿತು. ಪೃಥ್ವಿ ವಿಜ್ಞಾನ ಯೋಜನೆಯು ಏಕೀಕೃತ ಬಹುಶಿಸ್ತೀಯ ಭೂವಿಜ್ಞಾನ ಸಂಶೋಧನೆಗೆ ಅನುವು ಮಾಡಿಕೊಡಲಿದೆ ಎಂದು ಕೇಂದ್ರದ ಪ್ರಕಟಣೆ ತಿಳಿಸಿದೆ. 

ಹವಾಮಾನ, ಸಮುದ್ರ, ನೀರು ಹೆಪ್ಪುಗಟ್ಟಿರುವ ಸ್ಥಳಗಳು, ಭೂಕಂಪನ ವಿಜ್ಞಾನಕ್ಕೆ ಸಂಬಂಧಿಸಿದ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಈ ಸಂಶೋಧನೆಗಳು ನೆರವು ನೀಡಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT