ಲಖನೌ: ಕೋವಿಡ್ ಕಾರಣದಿಂದಾಗಿ ಇಲ್ಲಿನ ಆಸ್ಪತ್ರೆಯಲ್ಲಿ ಮೃತಪಟ್ಟ ಏಳು ದಿನಗಳ ನಂತರ ಲಖನೌಗೆ ಥಾಯ್ಲೆಂಡ್ ಮಹಿಳೆಯ ಭೇಟಿಯ ಕುರಿತಾಗಿ ಉತ್ತರ ಪ್ರದೇಶದ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತನಿಖೆಯನ್ನು ಪೊಲೀಸ್ ಉಪ ಆಯುಕ್ತ (ಪೂರ್ವ) ಸಂಜೀವ್ ಸುಮನ್ ವಹಿಸುತ್ತಿದ್ದಾರೆ ಎಂದು ಲಖನೌ ಪೊಲೀಸ್ ಆಯುಕ್ತ ಡಿ.ಕೆ. ಠಾಕೂರ್ ತಿಳಿಸಿದ್ದಾರೆ. ಶಂಕಿತರನ್ನು ವಿಚಾರಣೆ ತಂಡವು ಪ್ರಶ್ನಿಸಲು ಪ್ರಾರಂಭಿಸಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಕೋವಿಡ್‌ನಿಂದ ಮೃತಪಟ್ಟ ತಂದೆಯ ಮೃತದೇಹ ಪಡೆಯಲು ನಿರಾಕರಿಸಿದ ನ್ಯಾಯಾಧೀಶರು

ಥಾಯ್ಲೆಂಡ್‌ನ ಪ್ರಜೆ ಏಪ್ರಿಲ್ ತಿಂಗಳಲ್ಲಿ ನಗರಕ್ಕೆ ಆಗಮಿಸಿದ್ದರು. ಬಳಿಕ ಆಕೆಗೆ ಕೋವಿಡ್ ಸೋಂಕು ತಗುಲಿ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸಿದೆ ಮೇ 3ರಂದು ಮೃತಪಟ್ಟಿದ್ದರು. ಥಾಯ್ಲೆಂಡ್ ರಾಯಭಾರ ಕಚೇರಿಯೊಂದಿಗೆ ಅಗತ್ಯ ಔಪಚಾರಿಕತೆ ಪೂರ್ಣಗೊಳಿಸಿದಬಳಿಕ ಅಂತಿಮ ಸಂಸ್ಕಾರ ನೇರವೇರಿಸಲಾಗಿತ್ತು ಎಂದು ಅಧಿಕೃತ ಮೂಲಗಳು ತಿಳಿಸಿವೆ.

ರಾಜಕಾರಣಿಯ ಮಗನಿಗೆ ಥಾಯ್ ಮಹಿಳೆಯ ಜೊತೆ ಸಂಪರ್ಕವಿದೆ ಎಂಬ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಆರೋಪ ಕಂಡುಬಂದ ಬಳಿಕ ವಿಚಾರಣೆಯನ್ನು ಕೈಗೆತ್ತಿಗೊಳ್ಳಲು ನಿರ್ಧರಿಸಲಾಗಿದೆ.

ಬಿಜೆಪಿ ರಾಜ್ಯಸಭಾ ಸಂಸದ ಸಂಜಯ್ ಸೇಠ್ ಅವರು ಲಖನೌ ಪೊಲೀಸ್ ಆಯ್ತುಕರಿಗೆ ಭಾನುವಾರ ಪತ್ರ ಬರೆದು ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಹರಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.