‘ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ಕೋರಿಕೆಯ ಮೇರೆಗೆ ಆಯೋಗವು ಹೆಚ್ಚುವರಿಯಾಗಿ 89 ಅಭ್ಯರ್ಥಿಗಳನ್ನು ವಿವಿಧ ಸೇವೆಗಳಿಗೆ ಶಿಫಾರಸು ಮಾಡಿದೆ. ಇದರಲ್ಲಿ 65 ಮಂದಿ ಸಾಮಾನ್ಯ ವರ್ಗದ ಅಭ್ಯರ್ಥಿಗಳಿದ್ದರೆ, ಆರ್ಥಿಕವಾಗಿ ಹಿಂದುಳಿದ (ಇಡಬ್ಲ್ಯುಎಸ್) 7, ಹಿಂದುಳಿದ ವರ್ಗಗಳ (ಒಬಿಸಿ) 15, ಪರಿಶಿಷ್ಟ ಜಾತಿ–ಪಂಗಡದ(ಎಸ್‌ಸಿ–ಎಸ್‌ಟಿ) ತಲಾ ಒಬ್ಬ ಅಭ್ಯರ್ಥಿಗಳಿದ್ದಾರೆ‘ ಎಂದು ಯುಪಿಎಸ್‌ಸಿ ತಿಳಿಸಿದೆ.