ನವದೆಹಲಿ: ಭಾರತ– ಅಮೆರಿಕ ನಡುವಿನ ಸುಂಕ ಒಪ್ಪಂದಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ಅಮೆರಿಕ ಅಧ್ಯಕ್ಷ ಟ್ರಂಪ್ ಭಾರತದೊಂದಿಗೆ ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸಲು ಜುಲೈ 9ರ ಗಡುವು ನೀಡಿರುವುದು ಸಮೀಪಿಸುತ್ತಿರುವಂತೆ ಹಾಗೂ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರು ಭಾರತವು ಗಡುವಿನ ಅಧಾರದಲ್ಲಿ ಒಪ್ಪಂದಕ್ಕೆ ಪ್ರವೇಶಿಸುವುದಿಲ್ಲ ಎಂಬ ಹೇಳಿಕೆ ಬೆನ್ನಲೇ ರಾಹುಲ್ ಗಾಂಧಿ ಈ ವಾಗ್ದಾಳಿ ನಡೆಸಿದ್ದಾರೆ.

ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.

ಪಿಯೂಷ್ ಗೋಯಲ್ ಅವರು ಎಷ್ಟೇ ಎದೆ ತಟ್ಟಿಕೊಂಡು ಹೇಳಲಿ, ನನ್ನ ಮಾತುಗಳನ್ನು ನೆನಪಿಡಿ, ಪ್ರಧಾನಿ ಮೋದಿ ಟ್ರಂಪ್ ಸುಂಕದ ಗಡುವಿಗೆ ಸೌಮ್ಯವಾಗಿ ತಲೆಬಾಗುತ್ತಾರೆ ಎಂದು ಪೋಸ್ಟ್ನಲ್ಲಿ ಹೇಳಿದ್ದಾರೆ.
.ಭಾರತದ ಮೇಲೆ ಶೇ 500ರಷ್ಟು ಸುಂಕ: ಅಮೆರಿಕದ ಹೊಸ ಮಸೂದೆ; ಜೈಶಂಕರ್ ಹೇಳಿದ್ದಿಷ್ಟು...ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.