ನವದೆಹಲಿ: ರಾತ್ರಿ ವೇಳೆ ಸಂಚರಿಸುವ ವಂದೇ ಭಾರತ್ ಸ್ಲೀಪರ್ ಎಕ್ಸ್ಪ್ರೆಸ್ ರೈಲುಗಳಲ್ಲಿನ ಪ್ರಯಾಣ ದರವನ್ನು ಭಾರತೀಯ ರೈಲ್ವೆಯು ಪ್ರಕಟಿಸಿದ್ದು, ವಿಮಾನಯಾನದ ಟಿಕೆಟ್ ದರವನ್ನು ಹೋಲುತ್ತಿವೆ ಎನ್ನಲಾಗಿದೆ.

ವೇಗದ ಪ್ರಯಾಣದಲ್ಲಿ ಸುರಕ್ಷತೆಗೆ ಆದ್ಯತೆ ನೀಡಲಾಗಿದ್ದು, ಹೆಚ್ಚು ಸೌಕರ್ಯಗಳನ್ನು ಒದಗಿಸಲಾಗುತ್ತಿದೆ ಎಂದು ರೈಲ್ವೆಯು ತಿಳಿಸಿದೆ.

ಈ ರೈಲುಗಳ ಪ್ರಯಾಣ ದರವು ರಾಜಧಾನಿ ಎಕ್ಸ್ಪ್ರೆಸ್ ಪ್ರೀಮಿಯಂ ರೈಲುಗಳ ಟಿಕೆಟ್ ದರಕ್ಕಿಂತ ಕೊಂಚ ಹೆಚ್ಚಾಗಿರುತ್ತದೆ. 400 ಕಿ.ಮೀ. ದೂರಕ್ಕೆ ವಿಧಿಸುವ ಕನಿಷ್ಠ ಶುಲ್ಕವನ್ನು ಪ್ರಯಾಣಿಕರು ಭರಿಸಬೇಕಿದೆ.

ಗುವಾಹಟಿ– ಹೌರಾ ಮಾರ್ಗದಲ್ಲಿ ಮುಂದಿನ ವಾರ ಮೊದಲ ಬಾರಿಗೆ ರಾತ್ರಿ ರೈಲು ಸಂಚಾರ ಆರಂಭಗೊಳ್ಳಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಹಸಿರು ನಿಶಾನೆ ತೋರಲಿದ್ದಾರೆ.

ಮೂರನೇ ದರ್ಜೆಯ ಹವಾನಿಯಂತ್ರಿತ ಬೋಗಿಯಲ್ಲಿ ಸಂಚರಿಸಲು ಪ್ರತಿ ಕಿ.ಮೀ.ಗೆ ₹2.4, ದ್ವಿತೀಯ ದರ್ಜೆಯ ಹವಾನಿಯಂತ್ರಿತ ಬೋಗಿಯಲ್ಲಿ ಸಂಚರಿಸಲು ಪ್ರತಿ ಕಿ.ಮೀ.ಗೆ ₹3.1, ಮೊದಲ ದರ್ಜೆಯ ಹವಾನಿಯಂತ್ರಿತ ಬೋಗಿಯಲ್ಲಿ ಸಂಚರಿಸಲು ಪ್ರತಿ ಕಿ.ಮೀ.ಗೆ ₹3.8 ಶುಲ್ಕ ವಿಧಿಸಲಾಗುತ್ತಿದೆ.

400 ಕಿ.ಮೀ. ದೂರಕ್ಕೆ ಮೂರನೇ ದರ್ಜೆಯ ಹವಾನಿಯಂತ್ರಿತ ಬೋಗಿಯಲ್ಲಿ ಸಂಚರಿಸಲು ₹960, ದ್ವಿತೀಯ ದರ್ಜೆಯ ಹವಾನಿಯಂತ್ರಿತ ಬೋಗಿಯಲ್ಲಿ ಸಂಚರಿಸಲು ಪ್ರತಿ ಕಿ.ಮೀ.ಗೆ ₹1,240, ಮೊದಲ ದರ್ಜೆಯ ಹವಾನಿಯಂತ್ರಿತ ಬೋಗಿಯಲ್ಲಿ ಸಂಚರಿಸಲು ₹1,520 ಟಿಕೆಟ್ ದರವಿದೆ. ಜಿಎಸ್ಟಿ ಪ್ರತ್ಯೇಕ ಎಂದು ರೈಲ್ವೆ ಸಚಿವಾಲಯ ತಿಳಿಸಿದೆ.

ಹೌರಾ– ಗುವಾಹಟಿ ನಡುವಿನ ಒಂದು ಸಾವಿರ ಕಿ.ಮೀ. ದೂರದ ಪ್ರಯಾಣಕ್ಕೆ ಮೂರನೇ ದರ್ಜೆಯ ಹವಾನಿಯಂತ್ರಿತ ಬೋಗಿಯಲ್ಲಿ ಸಂಚರಿಸಲು ₹2,400, ದ್ವಿತೀಯ ದರ್ಜೆಯ ಹವಾನಿಯಂತ್ರಿತ ಬೋಗಿಯಲ್ಲಿ ಸಂಚರಿಸಲು ಪ್ರತಿ ಕಿ.ಮೀ.ಗೆ ₹3,100, ಮೊದಲ ದರ್ಜೆಯ ಹವಾನಿಯಂತ್ರಿತ ಬೋಗಿಯಲ್ಲಿ ಸಂಚರಿಸಲು ₹3,800 ಟಿಕೆಟ್ ದರವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.