ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಣೆ | ಮ್ಯೂಸಿಯಂನಲ್ಲಿ ಪ್ರದರ್ಶನಗೊಂಡ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಮಾದರಿ

Last Updated 5 ಏಪ್ರಿಲ್ 2023, 9:11 IST
ಅಕ್ಷರ ಗಾತ್ರ

ಪುಣೆ: ನಗರದಲ್ಲಿರುವ ರೈಲ್ವೆ ಪ್ರತಿರೂಪಗಳ ಜೋಶಿ ಮ್ಯೂಸಿಯಂನಲ್ಲಿ ರೈಲಿನ ಬಗ್ಗೆ ಉತ್ಸಾಹ ಹೊಂದಿರುವವರಿಗೆ ಮಾಹಿತಿ ಒದಗಿಸುವ ಉದ್ದೇಶದಿಂದ ಸ್ಥಳೀಯವಾಗಿ ವಿನ್ಯಾಸಗೊಳಿಸಲಾದ ‘ವಂದೇ ಭಾರತ್‌’ ಸೆಮಿ–ಸ್ಪೀಡ್‌ ಎಕ್ಸ್‌ಪ್ರೆಸ್‌ ರೈಲಿನ ಮಾದರಿಯನ್ನು ಪ್ರದರ್ಶನಕ್ಕೆ ಇಡಲಾಗಿದೆ.

ಮಂಗಳವಾರ ಮ್ಯೂಸಿಯಂನ 25 ವರ್ಷಗಳ ಸಂಭ್ರಮಾಚರಣೆಯ ಸಂದರ್ಭದಲ್ಲಿ ಮಾದರಿಯಲ್ಲಿ ನಿರ್ಮಿಸಲಾಗಿದ್ದ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲನ್ನು ಪುಣೆಯ ಸಚಿವ ಚಂದ್ರಕಾಂತ್‌ ಪಾಟೀಲ್‌ ಅನಾವರಣಗೊಳಿಸಿದರು. ಭಾರತೀಯ ರೈಲ್ವೆಯ ನಿಜವಾದ ರೇಖಾಚಿತ್ರಗಳ ಆಧಾರದ ಮೇಲೆ ಈ ಮಾದರಿಯನ್ನು ತಯಾರಿಸಲಾಗಿದೆ ಎಂದು ಮ್ಯೂಸಿಯಂನ ನಿರ್ವಾಹಕ ರವಿ ಜೋಶಿ ಹೇಳಿದ್ದಾರೆ.

‘ರೈಲಿನ ಮಾದರಿಯನ್ನು ತಯಾರಿಸಲು ಪ್ರತಿಯೊಂದು ಚಿಕ್ಕ ಮಾಹಿತಿಯನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ. ಕಾರ್ಯನಿರತ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿನ ಪ್ರತಿರೂಪದ ತಯಾರಿಕೆ ಕೆಲಸ ನಡೆಯುತ್ತಿದ್ದು, ಆದಷ್ಟು ಬೇಗ ಮ್ಯೂಸಿಯಂನಲ್ಲಿ ಪ್ರದರ್ಶನಕ್ಕೆ ಇಡಲಾಗುವುದು’ ಎಂದು ಅವರು ತಿಳಿಸಿದ್ದಾರೆ.

’ವಿಶ್ವದಾದ್ಯಂತ ಇರುವ ರೈಲು ಸಂಬಂಧಿತ ವೈಶಿಷ್ಟ್ಯಗಳನ್ನು ವಸ್ತುಸಂಗ್ರಹಾಲಯದಲ್ಲಿ ಪ್ರದರ್ಶಿಸಲಾಗಿದೆ, ಇದು ಸಂದರ್ಶಕರಿಗೆ ಹೆಚ್ಚಿನ ಜ್ಞಾನವನ್ನು ನೀಡುತ್ತದೆ. 'ವಂದೇ ಭಾರತ್' ಮಾದರಿಯ ಅನಾವರಣವು ಭವಿಷ್ಯಕ್ಕೆ ಸಂಬಂಧಿಸಿರುವುದರಿಂದ ವಿಶೇಷವಾಗಿದೆ’ ಎಂದು ಪಾಟೀಲ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT