ಭೋಪಾಲ್ (ಮಧ್ಯ ಪ್ರದೇಶ): ಮನೆಯೊಳಗಿದ್ದ ಅಂಧ ಮಹಿಳೆಯ ಮೇಲೆ ದುಷ್ಕರ್ಮಿ ಅತ್ಯಾಚಾರವೆಸಗಿರುವ ಘಟನೆ ಶುಕ್ರವಾರ ಭೋಪಾಲ್ನ ಷಾಹಪುರದಲ್ಲಿ ನಡೆದಿರುವುದಾಗಿ ಪೊಲೀಸರು ಹೇಳಿದ್ದಾರೆ.
ಬ್ಯಾಂಕ್ ಅಧಿಕಾರಿಯಾಗಿರುವ 53 ವರ್ಷ ವಯಸ್ಸಿನ ಮಹಿಳೆ ಅತ್ಯಾಚಾರಕ್ಕೆ ಒಳಗಾದವರು.
ಘಟನೆ ನಡೆದಾಗ ಮನೆಯಲ್ಲಿ ಅವರೊಬ್ಬರೇ ಇದ್ದರು. ಪತಿ ಹಾಗೂ ಕುಟುಂಬದ ಸದಸ್ಯರು ಕೋವಿಡ್–19 ಲಾಕ್ಡೌನ್ನಿಂದಾಗಿ ರಾಜಸ್ಥಾನದಲ್ಲಿ ಸಿಲುಕಿದ್ದಾರೆ.
ಸಂತ್ರಸ್ತೆ ನೀಡಿರುವ ದೂರಿನ ಅನ್ವಯ, ಅಂಧ ಮಹಿಳೆಯು ಮನೆಯಲ್ಲಿ ಮಲಗಿದ್ದರು. ಗುರುತು ಪತ್ತೆಯಾದ ವ್ಯಕ್ತಿಯೊಬ್ಬ ಅವರ ಕೋಣೆಗೆ ಬಂದು ಅತ್ಯಾಚಾರವೆಸಗಿದ್ದಾನೆ. ಪ್ರಸ್ತುತ ಆರೋಪಿಯ ಬಗ್ಗೆ ಪೊಲೀಸರಿಗೆ ಯಾವುದೇ ಸುಳಿವು ದೊರೆತಿಲ್ಲ ಹಾಗೂ ತನಿಖೆ ಮುಂದುವರಿಸಿದ್ದಾರೆ.
ಪೊಲೀಸರು ಸ್ಥಳಕ್ಕೆ ತೆರಳಿ ಘಟನೆ ಪೂರ್ಣ ವಿವರ ಪಡೆದಿದ್ದಾರೆ. ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಎಎಸ್ಪಿ ಸಂಜಯ್ ಸಾಹು ತಿಳಿಸಿರುವುದಾಗಿ ಎಎನ್ಐ ವರದಿ ಮಾಡಿದೆ.
ಷಾಹಪುರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 376 ಮತ್ತು ಸೆಕ್ಷನ್ 377 ಅಡಿಯಲ್ಲಿ ಅನಾಮಿಕ ಆರೋಪಿಯ ವಿರುದ್ಧ ಪ್ರಕರಣ ದಾಖಲಾಗಿದೆ.