ಲಖನೌ: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ವೇಳೆ ಮತದಾರರ ಸೇವೆಗಳನ್ನು ಸುಲಭಗೊಳಿಸಲು ಕೇಂದ್ರ ಚುನಾವಣಾ ಆಯೋಗವು ಉತ್ತರ ಪ್ರದೇಶದಲ್ಲಿ ‘ಬುಕ್ ಎ ಕಾಲ್ ವಿತ್ ಬಿಎಲ್ಒ’ ಸೌಲಭ್ಯಕ್ಕೆ ಚಾಲನೆ ನೀಡಿದೆ.

ಪ್ರಕಟವಾಗಿರುವ ಎಸ್ಐಆರ್ ಕರಡು ಪಟ್ಟಿಗೆ ಆಕ್ಷೇಪಣೆ, ಹೆಸರು ಸೇರ್ಪಡೆ, ತಿದ್ದುಪಡಿಗಳೇನಾದರೂ ಇದ್ದರೆ ಅದಕ್ಕೆ ಅರ್ಜಿ ಸಲ್ಲಿಸಲು ಫೆಬ್ರುವರಿ 6ರವರೆಗೆ ಸಮಯಾವಕಾಶ ಇದೆ ಎಂದು ಆಯೋಗ ತಿಳಿಸಿದೆ. ಇದಕ್ಕೆ ಪೂರಕವಾಗಿ ಮತದಾರರು ತಮ್ಮ ಬೂತ್ ಮಟ್ಟದ ಅಧಿಕಾರಿ (ಬಿಎಲ್ಒ) ಜತೆ ದೂರವಾಣಿ ಕರೆಯನ್ನು ಬುಕ್ ಮಾಡಿ, ಮಾಹಿತಿ ಅಥವಾ ನೆರವು ಪಡೆಯಬಹುದು ಎಂದು ಅದು ಪ್ರಕಟಣೆಯಲ್ಲಿ ಹೇಳಿದೆ.

ಈ ಸೇವೆಯು ಆಯೋಗದ ಪೋರ್ಟಲ್ voters.eci.gov.in ಮತ್ತು ECINET ಮೊಬೈಲ್ ಅಪ್ಲಿಕೇಷನ್ನಲ್ಲಿ ಲಭ್ಯವಿದೆ. ಈ ಸೇವೆ ಪಡೆಯಲು ನೋಂದಾಯಿತ ಮೊಬೈಲ್ ಸಂಖ್ಯೆಯೊಂದಿಗೆ ‘ಲಾಗಿನ್’ ಆಗಬೇಕು ಅಥವಾ ಒಟಿಪಿ ಬಳಸಿಕೊಂಡು ‘ಸೈನ್ಅಪ್’ ಆಗಬೇಕು. ನಂತರ ತಮ್ಮ ಎಪಿಕ್ ಸಂಖ್ಯೆಯನ್ನು ನಮೂದಿಸಬೇಕು ಅಥವಾ ಪರ್ಯಾಯವಾಗಿ ರಾಜ್ಯ, ಜಿಲ್ಲೆ, ವಿಧಾನಸಭಾ ಕ್ಷೇತ್ರ ಮತ್ತು ಬೂತ್ ಸಂಖ್ಯೆಯ ವಿವರಗಳನ್ನು ಒದಗಿಸಿ ಕರೆಯನ್ನು ಬುಕ್ ಮಾಡಬೇಕು. ಸಂಬಂಧಿಸಿದ ಬಿಎಲ್ಒ 48 ಗಂಟೆಗಳ ಒಳಗೆ ಮತದಾರರನ್ನು ಸಂಪರ್ಕಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಈಗಾಗಲೇ ಉತ್ತರ ಪ್ರದೇಶದಲ್ಲಿ ಎಸ್ಐಆರ್ ಕರಡು ಪಟ್ಟಿಯನ್ನು ಆಯೋಗ ಪ್ರಕಟಿಸಿದ್ದು, 2.89 ಕೋಟಿ ಮತದಾರರನ್ನು ಕೈಬಿಡಲಾಗಿದೆ. ಇದರಿಂದ ರಾಜ್ಯದ ಮತದಾರರ ಸಂಖ್ಯೆ ಒಟ್ಟು 12.55 ಕೋಟಿಗೆ ಇಳಿಕೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.