ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರ್ಮಿಕ ಆಚರಣೆಗಳಿಲ್ಲದ, ಎಲ್ಲರನ್ನು ಸಮಾನವಾಗಿ ಕಾಣುವ ಸಂಸತ್ ಭವನ ಬೇಕಿದೆ: ಸಿಬಲ್‌

Published 30 ಮೇ 2023, 10:00 IST
Last Updated 30 ಮೇ 2023, 10:00 IST
ಅಕ್ಷರ ಗಾತ್ರ

ನವದೆಹಲಿ: ‘ನನ್ನ ಭಾರತಕ್ಕೆ ಹೊಸ ಅಥವಾ ಹಳೆ ಸಂಸತ್‌ ಭವನ ಬೇಕಿಲ್ಲ. ಬದಲಾಗಿ ಧಾರ್ಮಿಕ ಆಚರಣೆಗಳಿಲ್ಲದ, ಎಲ್ಲರನ್ನೂ ಸಮಾನವಾಗಿ ಕಾಣುವ ಸಂಸತ್‌ ಭವನ ಬೇಕಿದೆ‘ ಎಂದು ಹೊಸ ಸಂಸತ್‌ ಭವನದ ವಿಚಾರವಾಗಿ ಸಂಸದ ಕಪಿಲ್ ಸಿಬಲ್‌ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಭಾನುವಾರ ಹೊಸ ಸಂಸತ್‌ ಭವನ ಉದ್ಘಾಟನಾ ಮಾಡಿದ ಪ್ರಧಾನಿ ನರೇಂದ್ರ ಮೋದಿ, ‘ಹೊಸ ಸಂಸತ್‌ ಭವನವು ನವ ಭಾರತದ ಆಶಯಗಳಿಗೆ ಪ್ರತಿಬಿಂಬವಾಗಿವೆ ಮತ್ತು ಸ್ವಾವಲಂಬಿ ರಾಷ್ಟ್ರದ ಉದಯಕ್ಕೆ ಸಾಕ್ಷಿಯಾಗಲಿದೆ‘ ಎಂದು ಹೇಳಿದ್ದರು.

ಈ ವಿಚಾರವಾಗಿ ಟ್ವೀಟ್ ಮಾಡಿರುವ ಕಪಿಲ್ ಸಿಬಲ್‌, ‘ನವ ಭಾರತ ಆಶಯಗಳಿಗಾಗಿ ಹೊಸ ಸಂಸತ್‌ ಭವನ ಎಂದು ಬಿಜೆಪಿ ಮತ್ತು ಕೇಂದ್ರ ಸರ್ಕಾರ ವರ್ಣಿಸಿವೆ. ಆದರೆ, ನನಗೆ ಹೊಸ ಅಥವಾ ಹಳೆ ಸಂಸತ್‌ ಭವನ ಬೇಡ. ನನಗೆ ಯಾವ ರೀತಿಯ ಸಂಸತ್‌ ಭವನ ಬೇಕೆಂದರೆ... ಧಾರ್ಮಿಕ ಆಚರಣೆಗಳಿಲ್ಲದ, ಎಲ್ಲರನ್ನು ಸಮಾನವಾಗಿ ಪರಿಗಣಿಸುವ, ಧರ್ಮ ರಕ್ಷಣೆ ಮತ್ತು ವ್ಯಾಪಾರಕ್ಕಾಗಿ ನಾಗರಿಕರನ್ನು ಕೊಲ್ಲದ, ಬಜರಂಗದಳದ ಭಯವಿಲ್ಲದ, ಸರ್ಕಾರಿ ಸಂಸ್ಥೆಗಳನ್ನು ರಾಜಕೀಯಗೊಳಿಸದ, ನ್ಯಾಯಯುತವಾಗಿ ಕಾರ್ಯನಿರ್ವಹಿಸುವ ಮಾಧ್ಯಮಗಳಿರುವ ಸಂಸತ್‌ ಭವನ ಬೇಕು‘ ಎಂದು ಬರೆದುಕೊಂಡಿದ್ದಾರೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಆಹ್ವಾನಿಸಲಿಲ್ಲ ಎಂಬ ಕಾರಣಕ್ಕೆ ಹೊಸ ಸಂಸತ್‌ ಭವನದ ಉದ್ಘಾಟನಾ ಸಮಾರಂಭವು ಹಲವು ವಿವಾದಗಳಿಗೆ ಕಾರಣವಾಗಿತ್ತು. ಇದೇ ವಿಚಾರವಾಗಿ 21 ವಿಪಕ್ಷಗಳು ಉದ್ಘಾಟನಾ ಸಮಾರಂಭವನ್ನು ಬಹಿಷ್ಕರಿಸಿದ್ದವು.

ಇದೇ ಲೈಂಗಿಕ ಆರೋಪ ಎದುರಿಸುತ್ತಿರುವ ಬಿಜೆಪಿ ಸಂಸದ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ ಬಂಧಿಸುವಂತೆ ಒತ್ತಾಯಿಸಿ ಕುಸ್ತಿಪಟುಗಳು ಹೊಸ ಸಂಸತ್‌ ಭವನದ ಹೊರಗಡೆ ಪ್ರತಿಭಟನೆ ನಡೆಸಿದ್ದು, ಹಲವು ಪ್ರತಿಭಟನಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT