ಮಧುರೈ: ವಕ್ಫ್ ತಿದ್ದುಪಡಿ ಮಸೂದೆಯನ್ನು ಸಂವಿಧಾನದ ಮೇಲಿನ ದಾಳಿ ಎಂದು ಕರೆದಿರುವ ಸಿಪಿಐ(ಎಂ) ನಾಯಕಿ ಬೃಂದಾ ಕಾರಟ್, ಇದರ ವಿರುದ್ಧ ತಮ್ಮ ಪಕ್ಷ ಹೋರಾಡಲಿದೆ ಎಂದು ಕಿಡಿಕಾರಿದ್ದಾರೆ.

ಮಧುರೈನಲ್ಲಿ ನಡೆದ ಪಕ್ಷದ 24ನೇ ಮಹಾ ಅಧಿವೇಶನದ ವೇಳೆ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ವಕ್ಫ್ ತಿದ್ದುಪಡಿ ಮಸೂದೆಯು ಭಾರತದ ಸಂವಿಧಾನದ ಮೇಲಿನ ದಾಳಿಯಾಗಿದೆ. ಇದು ಕೇವಲ ವಕ್ಫ್ ಮಂಡಳಿಯ ಕಾರ್ಯವೈಖರಿಗೆ ಸಂಬಂಧಿಸಿದ ವಿಷಯವಾಗಿದ್ದರೆ, ಮುಸ್ಲಿಂ ಸಮುದಾಯದೊಂದಿಗೆ ಸಮಾಲೋಚಿಸಿ ಸುಧಾರಣೆಗಳನ್ನು ತರಬಹುದಿತ್ತು’ ಎಂದು ಅವರು ಹೇಳಿದ್ದಾರೆ.

ಬಿಜೆಪಿ ಇಸ್ಲಾಂ ಧರ್ಮದವರ ಮೇಲೆ ದೌರ್ಜನ್ಯ ನಡೆಸುತ್ತಿದೆ. ಇದನ್ನು ಜಾರಿ ಮಾಡಲು ಸಂಸತ್ತಿನಲ್ಲಿ ತನ್ನ ಬಹುಮತವನ್ನು ಬಳಸಿದರೂ, ಸಂವಿಧಾನದ ಮೇಲಿನ ಈ ದಾಳಿಯ ವಿರುದ್ಧ ಹೋರಾಡಲು ನಾವು ಲಭ್ಯವಿರುವ ಪ್ರತಿಯೊಂದು ವೇದಿಕೆಯನ್ನು ಬಳಸುತ್ತೇವೆ' ಎಂದು ಕಾರಟ್ ಹೇಳಿದರು.

ವಕ್ಫ್ ತಿದ್ದುಪಡಿ ಮಸೂದೆ 2025 ಲೋಕಸಭೆಯಲ್ಲಿ ಅಂಗೀಕಾರವಾಗಿದ್ದು, ರಾಜ್ಯಸಭೆಯಲ್ಲಿ ಮಂಡಿಸಲಾಗಿದೆ.
.ವಕ್ಫ್ ಮಂಡಳಿಗಳು ಭೂ ಅತಿಕ್ರಮಣ ಮಾಡಿವೆ, ಅದೊಂದು ಮಾಫಿಯಾ: ಯೋಗಿ.Waqf Amendment Bill: ವಿವಾದಿತ ವಕ್ಫ್ ತಿದ್ದುಪಡಿ ಮಸೂದೆಗೆ ಲೋಕಸಭೆ ಅಸ್ತು.ರಾಜ್ಯಸಭೆಯಲ್ಲಿ ವಕ್ಫ್ ಮಸೂದೆ ಮಂಡನೆ: ವಿರೋಧ ಪಕ್ಷಗಳ ಬೆಂಬಲ ಕೋರಿದ ಸರ್ಕಾರ.ಲೋಕಸಭೆಯಲ್ಲಿ ವಕ್ಫ್ ಮಸೂದೆ ಅಂಗೀಕಾರ: ಅಖಿಲ ಭಾರತ ಮುಸ್ಲಿಂ ಜಮಾತ್ ಸ್ವಾಗತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.