ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರಣಾಸಿಯಲ್ಲಿ ಜೂನ್ 15 ರಿಂದ ವಾಟರ್ ಟ್ಯಾಕ್ಸಿ ಸೇವೆ ಆರಂಭ

Published 1 ಜೂನ್ 2023, 7:47 IST
Last Updated 1 ಜೂನ್ 2023, 7:47 IST
ಅಕ್ಷರ ಗಾತ್ರ

ವಾರಣಾಸಿ(ಉತ್ತರ ಪ್ರದೇಶ) : ವಾರಣಾಸಿಯ ಗಂಗಾ ನದಿಯಲ್ಲಿ ಜೂನ್ 15 ರಿಂದ ವಾಟರ್ ಟ್ಯಾಕ್ಸಿ ಸೇವೆ ಆರಂಭವಾಗಲಿದೆ.

ಈ ಕುರಿತು ಮಾತನಾಡಿರುವ ವಿಭಾಗೀಯ ಆಯುಕ್ತ ಕೌಶಲ್ ರಾಜ್ ಶರ್ಮಾ ‘ಜೂನ್ 15ರಿಂದ ಗಂಗಾ ನದಿಯಲ್ಲಿ ಎರಡು ಮೋಟಾರ್ ಬೋಟ್‌ಗಳನ್ನು ಅಳವಡಿಸಿ ವಾಟರ್ ಟ್ಯಾಕ್ಸಿ ಸೇವೆ ಆರಂಭಿಸಲಾಗುವುದು. ವಾಟರ್‌ ಟ್ಯಾಕ್ಸಿಗಳ ಕಾರ್ಯಾಚರಣೆಯ ತರಬೇತಿಗಾಗಿ ಇಬ್ಬರು ಅಧಿಕಾರಿಗಳ ತಂಡವನ್ನು ಕೊಚ್ಚಿನ್‌ಗೆ ಕಳುಹಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಈ ವಾಟರ್‌ ಟಾಕ್ಸಿಯಲ್ಲಿ ಗರಿಷ್ಠ 86 ಪ್ರಯಾಣಿಕರು ಸಂಚಾರಿಸಬಹುದು.

ಎರಡು ವಾಟರ್ ಟ್ಯಾಕ್ಸಿಗಳು ರಾಮ್‌ನಗರ ಕೋಟೆ ಮತ್ತು ನಮೋ ಘಾಟ್ ನಡುವೆ ಕಾರ್ಯನಿರ್ವಹಿಸಲು ಪ್ರಾರಂಭಿಸುತ್ತವೆ. ಸೆಪ್ಟೆಂಬರ್‌ನಲ್ಲಿ ನಂತರ, ಇನ್ನೂ ನಾಲ್ಕು ವಾಟರ್‌ ಟ್ಯಾಕ್ಸಿಗಳನ್ನು ಪರಿಚಯಿಸಲಾಗುತ್ತದೆ ಎಂದು ಕೌಶಲ್ ರಾಜ್ ಶರ್ಮಾ ತಿಳಿಸಿದ್ದಾರೆ.

ಅಸ್ಸಿ, ದಶಾಶ್ವಮೇಧ್ ಮತ್ತು ರಾಜ್‌ಘಾಟ್‌ನಲ್ಲಿ ವಾಟರ್‌ ಟ್ಯಾಕ್ಸಿ ನಿಲುಗಡೆ ನೀಡಲಿವೆ. ಗಂಗಾ ನದಿಯಲ್ಲಿ ಚಲಿಸುವ ದೋಣಿಗಳಿಗೆ ನಿಗದಿಪಡಿಸಿದ ದರಕ್ಕೆ ಟಾಕ್ಸಿ ದರವು ಸಮನಾಗಿರುತ್ತದೆ.

ಕಾಶಿ ವಿಶ್ವನಾಥ ಧಾಮದ ಗಂಗಾ ಪ್ರವೇಶ ದ್ವಾರದಲ್ಲಿ ಜೆಟ್ಟಿಯನ್ನು ಕಾರ್ಯಗತಗೊಳಿಸುವ ಕಾರ್ಯವೂ ಶೀಘ್ರದಲ್ಲೇ ಪೂರ್ಣಗೊಳ್ಳಲಿದ್ದು, ಯಾತ್ರಾರ್ಥಿಗಳು ನೀರಿನ ಟ್ಯಾಕ್ಸಿಗಳ ಮೂಲಕ ಕೆವಿ ಧಾಮಕ್ಕೆ ತಲುಪಲು ಸಾಧ್ಯವಾಗುತ್ತದೆ ಎಂದು ವಿಭಾಗೀಯ ಆಯುಕ್ತರು ಹೇಳಿದರು.

ಆರು ವಾಟರ್ ಟ್ಯಾಕ್ಸಿಗಳ ಹೊರತಾಗಿ, ಅದೇ ಮಾದರಿಯ ಇನ್ನೂ ನಾಲ್ಕು ದೋಣಿಗಳನ್ನು ಸಹ ಸಿದ್ದಪಡಿಸಲಾಗುವುದು. ಇವುಗಳನ್ನು ಆಂಬ್ಯುಲೆನ್ಸ್‌ಗಳಾಗಿ ಅಥವಾ ಶವಗಳನ್ನು ಶವಸಂಸ್ಕಾರ ಸ್ಥಳಗಳಿಗೆ ಸಾಗಿಸಲು ಬಳಸಲಾಗುವುದು ಎಂದು ಕೌಶಲ್ ರಾಜ್ ಶರ್ಮಾ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT