ವಯನಾಡ್: ಭೂಕುಸಿತ ಸಂಭವಿಸಿದ ಹತ್ತು ದಿನಗಳ ನಂತರವೂ ಇಲ್ಲಿ ನಾಪತ್ತೆ ಆದವರಿಗಾಗಿ ಹುಡುಕಾಟ ನಡೆದಿದೆ. ಈಗ ಬಂಧುಗಳು, ಅವಘಡದಲ್ಲಿ ಉಳಿದವರೂ ಶೋಧಕ್ಕೆ ಕೈಜೋಡಿಸಿದ್ದಾರೆ.
ಜಿಲ್ಲಾಡಳಿತದ ಪ್ರಕಾರ, ಚೂರಲ್‌ಮಲ, ಮುಂಡಕ್ಕೈನಲ್ಲಿ ಒಟ್ಟು 131 ಮಂದಿ ನಾಪತ್ತೆಯಾಗಿದ್ದಾರೆ.
ದುರಂತ ಸ್ಥಳಕ್ಕೆ ಶನಿವಾರ ಪ್ರಧಾನಿ ಭೇಟಿ ನೀಡಲಿದ್ದು, ಭದ್ರತಾ ಕಾರಣಗಳಿಗಾಗಿ ದಿನದ ಮಟ್ಟಿಗೆ ಶೋಧ ಕಾರ್ಯಕ್ಕೆ ವಿರಾಮ ಸಿಗಲಿದೆ. ಶುಕ್ರವಾರ ಬೆಳಿಗ್ಗೆ ಪ್ರದೇಶವನ್ನು ಎಸ್‌ಪಿಜಿ ಸುಪರ್ದಿಗೆ ಒಪ್ಪಿಸಲಾಗಿದೆ.
ಇದಕ್ಕೂ ಮುನ್ನ ಅವಘಡದ ಸ್ಥಳ ಮತ್ತು ಭೌಗೋಳಿಕ ವ್ಯಾಪ್ತಿ ಕುರಿತು ಮಾಹಿತಿ ಒದಗಿಸಿ ಶೋಧಕ್ಕೆ ಸಿಬ್ಬಂದಿಗೆ ನೆರವಾಗಲು ಪ್ರತಿ ಶಿಬಿರಗಳಿಂದ ನಾಲ್ಕು ಮಂದಿ ಸ್ಥಳೀಯರ ನೆರವು ಪಡೆಯಲಾಯಿತು.
ಪ್ರಧಾನಿ ಮೋದಿ ಭೇಟಿಯ ಬಳಿಕ ಭಾನುವಾರ ಮತ್ತೆ ಶೋಧ ಕಾರ್ಯವು ಮುಂದುವರಿಯಲಿದೆ ಎಂದು ಸಚಿವ ಪಿ.ಎ.ಮೊಹಮ್ಮದ್ ರಿಯಾಸ್ ಅವರು ತಿಳಿಸಿದರು.
ಮುಂಡಕ್ಕೈ, ಚೂರಲ್‌ಮಲದಲ್ಲಿ ಆರು ವಲಯಗಳಾಗಿ ಗುರುತಿಸಿ ಶೋಧ ಕಾರ್ಯ ನಡೆಸಲಾಗುತ್ತಿದೆ. ನಾಪತ್ತೆಯಾದವರ ಪತ್ತೆಗೆ ಕೊನೆಯ ಯತ್ನವಾಗಿ ಅವರ ಬಂಧುಗಳು, ಸ್ಥಳೀಯರ ನೆರವನ್ನು ಪಡೆಯಲಾಗುತ್ತಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.