ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶ ಮೋದಿ ಗ್ಯಾರಂಟಿಯನ್ನು ನಂಬಿದೆ, NDA 400 ಕ್ಷೇತ್ರಗಳಲ್ಲಿ ಗೆಲ್ಲಲಿದೆ: ಮೋದಿ

Published 1 ಮಾರ್ಚ್ 2024, 9:55 IST
Last Updated 1 ಮಾರ್ಚ್ 2024, 9:55 IST
ಅಕ್ಷರ ಗಾತ್ರ

ಬರ್ವಾದಾ (ಜಾರ್ಖಂಡ್): ದೇಶವು ಮೋದಿ ಗ್ಯಾರಂಟಿಯನ್ನು ನೆಚ್ಚಿಕೊಂಡಿದೆ, ಹೀಗಾಗಿ ಮುಂದಿನ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟವು 400ಕ್ಕೂ ಹೆಚ್ಚು ಸೀಟುಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಜಾರ್ಖಂಡ್‌ನ ಧನ್‌ಬಾದ್‌ನಲ್ಲಿ ನಡೆದ ‘ವಿಜಯ ಸಂಕಲ್ಪ ಮಹಾರ‍್ಯಾಲಿ’ಯಲ್ಲಿ ಅವರು ಮಾತನಾಡಿದರು.

‘ಜಲ ಜೀವನ್ ಮಿಷನ್‌‘, ‘ಪಿಎಂ ಆವಾಸ್‌ ಯೋಜನೆ’ ಕಾರ್ಯಕ್ರಮಗಳನ್ನು ಕಾರ್ಯಗತಗೊಳಿಸಲು ‘ಇಂಡಿಯಾ’ ಮೈತ್ರಿಕೂಟವೂ ಬಿಡುತ್ತಿಲ್ಲ ಎಂದೂ ಅವರು ಆರೋಪಿಸಿದರು. ಅದೊಂದು ಅಭಿವೃದ್ಧಿ ವಿರೋಧಿ, ಜನವಿರೋಧಿ ಮೈತ್ರಿಕೂಟ ಎಂದು ಅವರು ಕಿಡಿಕಾರಿದರು.

‘ಇತರರ ಎಲ್ಲಾ ಭರವಸೆಗಳು ಮುಗಿಯುವಾಗ ಮೋದಿ ಗ್ಯಾರಂಟಿ ಆರಂಭವಾಗುತ್ತದೆ. ಸಿಂದ್ರಿ ರಸಗೊಬ್ಬರ ವಿಭಾಗ ಹಾಗೂ ಉತ್ತರ ಕರಣ್‌ಪುರ ವಿದ್ಯುತ್‌ ಯೋಜನೆ ಮುಂತಾದವುಗಳು ಮೋದಿ ಗ್ಯಾರಂಟಿ ಈಡೇರಿದ ಉದಾಹರಣೆಗಳು’ ಎಂದು ಅವರು ಹೇಳಿದರು.

ಜೆಎಂಎಂ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧವೂ ವಾಗ್ದಾಳಿ ನಡೆಸಿದ ಅವರು, ‘ಸರ್ಕಾರ ರಾಜ್ಯವನ್ನು ಲೂಟಿ ಮಾಡಿದೆ. ಜಾರ್ಖಂಡ್‌ನಲ್ಲಿ ಇಷ್ಟೊಂದು ಬಂಡಲ್ ಪ್ರಮಾಣದ ಹಣ ವಶಪಡಿಸಿಕೊಂಡಿದ್ದನ್ನು ನಾನು ನೋಡಿಲ್ಲ. ಜನರಿಂದ ಲೂಟಿ ಮಾಡಿದ ಹಣವನ್ನು ಜನರಿಗೆ ಹಿಂದಿರುಗಿಸುತ್ತೇವೆ. ಇದು ಮೋದಿ ಗ್ಯಾರಂಟಿ’ ಎಂದರು.

‘ರಾಜ್ಯದಲ್ಲಿ ಸುಲಿಗೆ ಪ್ರಮಾಣ ಮಿತಿ ಮೀರಿದೆ. ತುಷ್ಟೀಕರಣದ ಕಾರಣದಿಂದಾಗಿ ಒಳನುಸುಳುವಿಕೆ ಹೆಚ್ಚಳವಾಗಿದೆ’ ಎಂದು ವಾಗ್ದಾಳಿ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT