ಡಾ.ಆದಿಲ್‌ಗೆ ತಿಂಗಳಿಗೆ ₹4 ಲಕ್ಷ ವೇತನ!
ಬಂಧಿತ ವೈದ್ಯ ಆದಿಲ್ ರಾಠರ್ ವಸತಿ ಜೊತೆಗೆ ಪ್ರತಿ ತಿಂಗಳು ₹4 ಲಕ್ಷ ವೇತನ ಪಡೆಯುತ್ತಿದ್ದ ಎಂದು ತಿಳಿದುಬಂದಿದೆ. ದಕ್ಷಿಣ ಕಾಶ್ಮೀರದ ಅನಂತನಾಗ್‌ನ ಆದಿಲ್ ಉತ್ತರ ಪ್ರದೇಶದ ಸಹಾರನಪುರದ ವಿ ಬ್ರೋಸ್ ಆಸ್ಪತ್ರೆಯಲ್ಲಿ ವೈದ್ಯನಾಗಿ ಕಾರ್ಯನಿರ್ವಹಿಸುತ್ತಿದ್ದ. 2024ರ ನವೆಂಬರ್ 24ರಂದು ಸಹಿ ಮಾಡಿದ ಒಪ್ಪಂದ ಪತ್ರದ ಪ್ರಕಾರ ಆದಿಲ್ ಪ್ರತಿ ತಿಂಗಳು ₹4 ಲಕ್ಷ ವೇತನ ಪಡೆಯುತ್ತಿದ್ದ. ಆಸ್ಪತ್ರೆಯೊಂದಿಗಿನ ಒಪ್ಪಂದದ ಪ್ರತಿಯು ಪ್ರಜಾವಾಣಿಗೆ ಲಭ್ಯವಾಗಿದೆ.