ಮುಂಬೈ: ಎರಡೂ ಡೋಸ್ ಕೋವಿಡ್ ಲಸಿಕೆ ಪಡೆದವರಿಗೆ ಮುಂಬೈಯ ಲೋಕಲ್ ಟ್ರೈನ್‌ಗಳಲ್ಲಿ ಪ್ರಯಾಣಿಸಲು ಯಾಕೆ ಅವಕಾಶ ನೀಡುತ್ತಿಲ್ಲ ಎಂದು ಬಾಂಬೆ ಹೈಕೋರ್ಟ್ ಮಹಾರಾಷ್ಟ್ರ ಸರ್ಕಾರವನ್ನು ಪ್ರಶ್ನಿಸಿದೆ.

‘ಎರಡು ಡೋಸ್ ಲಸಿಕೆ ಪಡೆದ ಮೇಲೂ ಜನರು ತಮ್ಮ ಮನೆಗಳಲ್ಲೇ ಇರಬೇಕು ಎಂದು ನಿರೀಕ್ಷಿಸಿದರೆ ಲಸಿಕೆ ಪಡೆಯುವುದರ ಉದ್ದೇಶವಾದರೂ ಏನು?’ ಎಂದು ಮುಖ್ಯ ನ್ಯಾಯಮೂರ್ತಿ ದೀಪಂಕರ್ ದತ್ತಾ ಮತ್ತು ನ್ಯಾಯಮೂರ್ತಿ ಜಿ.ಎಸ್.ಕುಲಕರ್ಣಿ ಅವರಿದ್ದ ಪೀಠ ಕೇಳಿತು.

ಮುಂಬೈಯ ಜೀವನಾಡಿಯೇ ಆಗಿರುವ ಲೋಕಲ್ ಟ್ರೈನ್‌ಗಳಲ್ಲಿ ಸದ್ಯ ಮುಂಚೂಣಿ ಕಾರ್ಯಕರ್ತರು ಮತ್ತು ಸರ್ಕಾರಿ ನೌಕರರಿಗೆ ಮಾತ್ರ ಅನುಮತಿ ನೀಡಲಾಗಿದೆ. ವಕೀಲರಿಗೆ, ನ್ಯಾಯಾಂಗದ ಸಿಬ್ಬಂದಿಗೆ ಪ್ರಯಾಣಿಸಲು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಅವಕಾಶ ನೀಡಿಲ್ಲ ಎಂದು ಮಹಾರಾಷ್ಟ್ರದ ಅಡ್ವಕೇಟ್ ಜನರಲ್ ಆಶುತೋಷ್ ಕುಂಭಕೋಣಿ ಸಲ್ಲಿಸಿರುವ ಉತ್ತರವನ್ನು ಗಮನಿಸಿ ಪೀಠ ಈ ಪ್ರಶ್ನೆ ಮುಂದಿಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.