ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಟೆಲಿಗ್ರಾಂ' ಸ್ನೇಹಿತನೊಂದಿಗೆ ಮದುವೆ ನಿರಾಕರಿಸಿದ್ದಕ್ಕೆ ಮಹಡಿಯಿಂದ ಹಾರಿದ ಯುವತಿ!

Published 12 ಜುಲೈ 2023, 14:33 IST
Last Updated 12 ಜುಲೈ 2023, 14:33 IST
ಅಕ್ಷರ ಗಾತ್ರ

ನೋಯ್ಡಾ: ಸಾಮಾಜಿಕ ಜಾಲತಾಣ 'ಟೆಲಿಗ್ರಾಂ'ನಲ್ಲಿ ಪರಿಚಯನಾದ ಸ್ನೇಹಿತನೊಂದಿಗೆ ಮದುವೆ ಮಾಡಲು ನಿರಾಕರಿಸಿದ್ದರೆಂಬ ಕಾರಣಕ್ಕೆ ಯುವತಿಯೊಬ್ಬಳು ಅಪಾರ್ಟ್‌ಮೆಂಟ್‌ನ ಎರಡನೇ ಮಹಡಿಯಿಂದ ಬಿದ್ದು ಆತ್ಮಹತ್ಯೆಗೆ ಪ್ರಯತ್ನಿಸಿದ ಘಟನೆ ಉತ್ತರ ಪ್ರದೇಶ ನೋಯ್ಡಾದಲ್ಲಿ ನಡೆದಿದೆ.

ನೋಯ್ಡಾದ ಅಜ್‌ನಾರಾ ಎಂಬ ಅಪಾರ್ಟ್‌ಮೆಂಟ್‌ನಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಯುವತಿ ಎಂಬಿಎ ವ್ಯಾಸಂಗ ಮಾಡುತ್ತಿದ್ದು, ಟೆಲಿಗ್ರಾಂನಲ್ಲಿ ಪರಿಚಯನಾದ 23 ವರ್ಷದ ಹುಡುಗನ ಜೊತೆ ಮದುವೆಯಾಗಲು ಬಯಸಿದ್ದಳು.

'ಯುವತಿ ಮತ್ತು ಯುವಕ 'ಟೆಲಿಗ್ರಾಂ'ನಲ್ಲಿ ಪರಸ್ಪರ ಪರಿಚಯರಾಗಿದ್ದಾರೆ. ಇವರ ಪ್ರೀತಿಯ ಬಗ್ಗೆ ಯುವತಿಯ ಕುಟುಂಬದವರಿಗೆ ತಿಳಿದಿದ್ದು, ಪ್ರೀತಿ ಮಾಡದಂತೆ ತಾಕೀತು ಮಾಡಿದ್ದರು. ಆದರೆ, ಆಕೆ ಸ್ನೇಹಿತನ ಜೊತೆ ಸಂಪರ್ಕ ಮುಂದುವರಿಸಿದ್ದಳು' ಎಂದು ಪೊಲೀಸರು ತಿಳಿಸಿದ್ದಾರೆ.

'ಇಂದು ಇದೇ ವಿಚಾರವಾಗಿ ಯುವತಿಯ ಮನೆಯಲ್ಲಿ ಗಲಾಟೆ ನಡೆದಿತ್ತು. ಯುವತಿಯ ಫೋನ್‌ ಅನ್ನು ಕುಟುಂಬದವರು ಕಸಿದುಕೊಂಡಿದ್ದರು. ಇದರಿಂದ ಕೋಪಗೊಂಡ ಯುವತಿ ಎರಡನೇ ಮಹಡಿಯಿಂದ ಹಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾಳೆ' ಎಂದರು.

'ಮಹಡಿಯಿಂದ ಬಿದ್ದ ರಭಸಕ್ಕೆ ಯುವತಿ ತೀವ್ರವಾಗಿ ಗಾಯಗೊಂಡಿದ್ದಾಳೆ. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದರು. ಘಟನೆ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ' ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT