ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನಸಭೆಯಲ್ಲಿ ಮಹಿಳಾ ಪ್ರಾತಿನಿಧ್ಯ ನಿರಾಶಾದಾಯಕ

Published 4 ಡಿಸೆಂಬರ್ 2023, 15:50 IST
Last Updated 4 ಡಿಸೆಂಬರ್ 2023, 15:50 IST
ಅಕ್ಷರ ಗಾತ್ರ

ನವದೆಹಲಿ: ಛತ್ತೀಸಗಢ, ತೆಲಂಗಾಣ ಮತ್ತು ಮಧ್ಯಪ್ರದೇಶ ರಾಜ್ಯಗಳ ವಿಧಾನಸಭೆಗೆ ಆಯ್ಕೆ ಆದ ಮಹಿಳಾ ಸದಸ್ಯರ ಸಂಖ್ಯೆಯಲ್ಲಿ ತುಸು ಹೆಚ್ಚಳ ಕಂಡುಬಂದಿದೆ. ಲೋಕಸಭೆ ಮತ್ತು ರಾಜ್ಯಗಳ ವಿಧಾನಸಭೆಯಲ್ಲಿ ಮಹಿಳಾ ಸದಸ್ಯರ ಪ್ರಾತಿನಿಧ್ಯವು ಮೂರನೇ ಒಂದರಷ್ಟು ಇರಬೇಕು ಎಂದು ಈಚೆಗೆ ಸಂಸತ್ತಿನಲ್ಲಿ ಅಂಗೀಕಾರವಾದ ಮಹಿಳಾ ಮೀಸಲಾತಿ ಮಸೂದೆ ಹೇಳಲಾಗಿದೆ. ಈ ದಿಸೆಯಲ್ಲಿ ಹೊಸದಾಗಿ ಆಯ್ಕೆ ಆದ ವಿಧಾನಸಭೆಗಳಲ್ಲಿಯ ಮಹಿಳಾ ಪ್ರಾತಿನಿಧ್ಯ ನಿರಾಶಾದಾಯಕವಾಗಿದೆ.

ರಾಜಸ್ಥಾನದ ಪರಿಸ್ಥಿತಿ ಇನ್ನೂ ಶೋಚನೀಯವಾಗಿದ್ದು ವಿಧಾನಸಭೆಯಲ್ಲಿ ಮಹಿಳಾ ಪ್ರಾತಿನಿಧ್ಯ ಮತ್ತಷ್ಟು ಕಡಿಮೆಯಾಗಿದೆ.

ಛತ್ತೀಸಗಢದಲ್ಲಿ ಹೊಸದಾಗಿ ಆಯ್ಕೆ ಆದ ಶಾಸಕರಲ್ಲಿ ಶೇ 21ರಷ್ಟು ಮಹಿಳೆಯರಿದ್ದಾರೆ. 2018ರಲ್ಲಿ ರಾಜ್ಯದಲ್ಲಿ 13 ಶಾಸಕಿಯರು ಆಯ್ಕೆ ಆಗಿದ್ದರು. ಈ ಬಾರಿ 19 ಶಾಸಕಿಯರು ಆಯ್ಕೆ ಆಗಿದ್ದಾರೆ.

ತೆಲಂಗಾಣದಲ್ಲಿ ಕಳೆದ ಅವಧಿಯಲ್ಲಿ 6 ಶಾಸಕಿಯರಿದ್ದರು. ಈ ಬಾರಿ ಅವರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ಮಧ್ಯಪ್ರದೇಶದಲ್ಲಿ ಕಳೆದ ಅವಧಿಯಲ್ಲಿ 21 ಶಾಸಕಿಯರಿದ್ದರು , ಈ ಬಾರಿ 27 ಶಾಸಕಿಯರು ವಿಧಾನಸಭೆ ಪ್ರವೇಶಿಸಿದ್ದಾರೆ.

ರಾಜಸ್ಥಾನದಲ್ಲಿ 2018ರಲ್ಲಿ 24 ಶಾಸಕಿಯರಿದ್ದರು, ಈ ಬಾರಿ ಅವರ ಸಂಖ್ಯೆ 20ಕ್ಕೆ ಇಳಿದಿದೆ. 

ಸರಾಸರಿ ವಯಸ್ಸಲ್ಲಿ ಹೆಚ್ಚಳ: ಕಳೆದಬಾರಿಗೆ ಹೋಲಿಸಿದರೆ 55 ವರ್ಷ ವಯಸ್ಸು ಮೇಲ್ಪಟ್ಟ ಶಾಸಕರ ಸಂಖ್ಯೆಯೂ ಛತ್ತೀಸಗಢ, ಮಧ್ಯಪ್ರದೇಶ, ತೆಲಂಗಾಣದಲ್ಲಿ ಈ ಬಾರಿ ಹೆಚ್ಚೇ ಇದೆ. 55 ವರ್ಷ ಮೇಲ್ಟಟ್ಟ ಶಾಸಕರ ಸಂಖ್ಯೆ ಛತ್ತೀಸಗಢದಲ್ಲಿ ಶೇ 41 ಇದ್ದರೆ, ಮಧ್ಯಪ್ರದೇಶದಲ್ಲಿ ಶೇ 50 ಇದೆ. ಆಂಧ್ರಪ್ರದೇಶದಲ್ಲಿ ಶೇ 60 ಇದೆ. 

ಈ ವಿಚಾರದಲ್ಲೂ ರಾಜಸ್ಥಾನದ ಪರಿಸ್ಥಿತಿ ಭಿನ್ನವಾಗಿದೆ. 2018ಕ್ಕೆ (ಶೇ 48) ಹೋಲಿಸಿದರೆ 55 ವರ್ಷ ಮೇಲ್ಪಟ್ಟ ಶಾಸಕರ ಸಂಖ್ಯೆ ಈ ಬಾರಿ ಕಡಿಮೆಯಾಗಿದೆ. ಸದ್ಯ ಶೇ 46 ಶಾಸಕರು ಈ ವಯೋಮಾನದವರಾಗಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT