ಭುವನೇಶ್ವರ: ಒಡಿಶಾ ಸರ್ಕಾರದ ಮಹಿಳಾ ನೌಕರರಿಗೆ ತಿಂಗಳಿಗೊಂದು ಮುಟ್ಟಿನ ರಜೆ ನೀಡುವುದಾಗಿ ಅಲ್ಲಿನ ಸರ್ಕಾರ ಘೋಷಿಸಿದೆ.

ಇದರನ್ವಯ, ವಾರ್ಷಿಕವಾಗಿ ಈಗಿರುವ 15 ಸಾಂದರ್ಭಿಕ ರಜೆ(ಸಿಎಲ್) ಜೊತೆಗೆ ಹೆಚ್ಚುವರಿಯಾಗಿ 12 ರಜೆ ಸಿಗಲಿದೆ ಎಂದು ಮುಖ್ಯಮಂತ್ರಿಗಳ ಕಚೇರಿ ಬಿಡುಗಡೆ ಮಾಡಿರುವ ಅಧಿಕೃತ ಪ್ರಕಟಣೆ ತಿಳಿಸಿದೆ.

ಮಹಿಳಾ ಉದ್ಯೋಗಿಗಳು ತಿಂಗಳಿಗೆ ಒಂದು ದಿನ ವೇತನ ಸಹಿತ ಮುಟ್ಟಿನ ರಜೆಗೆ ಅರ್ಹರಾಗಿರುತ್ತಾರೆ ಎಂಬುದಾಗಿ ಉಪ ಮುಖ್ಯಮಂತ್ರಿ ಪ್ರವತಿ ಪರಿದಾ ಅವರು ಸ್ವಾತಂತ್ರ್ಯ ದಿನದಂದು ಹೇಳಿಕೆ ನೀಡಿದ್ದರು. ಅದರನ್ವಯ ಸರ್ಕಾರ ಇದೀಗ ಜಾರಿಗೆ ತಂದಿದೆ.

ಹಿಂದಿನ ಬಿಜೆಡಿ ಸರ್ಕಾರವು, ಕುಟುಂಬದ ಜವಾಬ್ದಾರಿಗಳು ಮತ್ತು ಮಹಿಳೆಯರ ವಿವಿಧ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಮಹಿಳೆಯರಿಗೆ ಹೆಚ್ಚುವರಿ 10 ಸಿಎಲ್ಗಳನ್ನು ಘೋಷಿಸಿತ್ತು.

ಈಗ, ಮಹಿಳಾ ಉದ್ಯೋಗಿಗಳ ಸಿಎಲ್ಗಳ ಸಂಖ್ಯೆ ಎರಡು ಪಟ್ಟು ಹೆಚ್ಚಾಗಿದೆ.

‘ಒಡಿಶಾ ಸರ್ಕಾರದ ಎಲ್ಲ ಮಹಿಳಾ ಉದ್ಯೋಗಿಗಳು ಪ್ರಸ್ತುತ ಪಡೆಯುವ 15 ದಿನಗಳ ಸಾಂದರ್ಭಿಕ ರಜೆ(ಸಿಎಲ್) ಹೊರತುಪಡಿಸಿ ವಾರ್ಷಿಕವಾಗಿ ಹೆಚ್ಚುವರಿ ಸಿಎಲ್ಗಳನ್ನು ಪಡೆಯಬಹುದು" ಎಂದು ಅಧಿಕೃತ ಟಿಪ್ಪಣಿಯಲ್ಲಿ ಸರ್ಕಾರ ತಿಳಿಸಿದೆ. ಈ ಕುರಿತು ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ನಿರ್ದೇಶನ ನೀಡಿದ್ದಾರೆ ಎಂದೂ ಅದು ತಿಳಿಸಿದೆ.

ಈಗ, ಮಹಿಳಾ ಉದ್ಯೋಗಿಗಳಿಗೆ ಸಿಎಲ್ಗಳ ಸಂಖ್ಯೆ 27ಕ್ಕೆ ಏರಿದ್ದು, ಪುರುಷರಿಗೆ 15 ಸಿಎಲ್ ಸಿಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.