ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ಈಗ ವಿಶ್ವ ಮಿತ್ರ; ಸ್ಥಿರತೆಯ ಆಧಾರಸ್ತಂಭ: ಪ್ರಧಾನಿ ಮೋದಿ

Published 10 ಜನವರಿ 2024, 10:00 IST
Last Updated 10 ಜನವರಿ 2024, 10:00 IST
ಅಕ್ಷರ ಗಾತ್ರ

ಗಾಂಧಿನಗರ: ‘ಜಾಗತಿಕ ಬೆಳವಣಿಗೆಯ ಎಂಜಿನ್ ಆಗಿರುವ ಭಾರತವನ್ನು ವಿಶ್ವಾಸಾರ್ಹ ಸ್ನೇಹಿತನಾಗಿ ಮತ್ತು ಸ್ಥಿರತೆಯ ಆಧಾರಸ್ತಂಭವಾಗಿ ಪರಿಗಣಿಸಲಾಗುತ್ತಿದೆ. ತಂತ್ರಜ್ಞಾನದ ಕೇಂದ್ರ ಹಾಗೂ ಪ್ರತಿಭಾವಂತ ಯುವ ಸಮೂಹದ ಶಕ್ತಿ ಕೇಂದ್ರವಾಗಿಯೂ ಭಾರತ ಹೊರಹೊಮ್ಮಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ವೈಬ್ರೆಂಟ್ ಗುಜರಾತ್‌ ಜಾಗತಿಕ ಸಮಾವೇಶದ 10ನೇ ಆವೃತ್ತಿಯನ್ನು ಉದ್ಘಾಟಿಸಿ ಬುಧವಾರ ಅವರು ಮಾತನಾಡಿದರು.

‘ಜಗತ್ತಿನ ಮುಂಚೂಣಿ ರಾಷ್ಟ್ರಗಳ ಪಟ್ಟಿ ಕ್ಷಿಪ್ರವಾಗಿ ಬದಲಾಗುತ್ತಿದೆ. ಈಗ ಭಾರತ ವಿಶ್ವ ಮಿತ್ರನಾಗಿ ಮುಂಚೂಣಿಗೆ ಬರುತ್ತಿದೆ. ಇನ್ನು ಕೆಲವೇ ವರ್ಷಗಳಲ್ಲಿ ಅತಿ ದೊಡ್ಡ ಆರ್ಥಿಕತೆಯ ವಿಶ್ವದ ಮೂರು ಪ್ರಮುಖ ರಾಷ್ಟ್ರಗಳ ಸ್ಥಾನಕ್ಕೇರಲಿದೆ ಎಂದು ಪ್ರಮುಖ ಸಂಸ್ಥೆಗಳು ಹೇಳುತ್ತಿವೆ’ ಎಂದಿದ್ದಾರೆ.

‘ಇಡೀ ಜಗತ್ತು ಒಂದೇ ಗುರಿಯತ್ತ ಸಾಗುತ್ತಿರುವ ಹಾಗೂ ಅದನ್ನು ಸಾಕಾರಗೊಳಿಸುವ ಭರವಸೆಯನ್ನು ವಿಶ್ವ ಮಿತ್ರನಾಗಿರುವ ಭಾರತ ನೀಡುತ್ತಿದೆ. ಉತ್ತಮ ಸ್ನೇಹಿತ ಹಾಗೂ ಪ್ರಮುಖ ಆಧಾರಸ್ತಂಭವಾಗಿರುವ ಭಾರತವು ಜಗತ್ತಿನ ಹಿತದೃಷ್ಟಿಯಿಂದ ಜನಕೇಂದ್ರಿತ ಅಭಿವೃದ್ಧಿಯತ್ತ ತನ್ನ ಗಮನ ಹರಿಸಿದೆ’ ಎಂದು ಹೇಳಿದ್ದಾರೆ.

‘ಭಾರತ ಸ್ವಾತಂತ್ರ್ಯ ಪಡೆದ 75ನೇ ವರ್ಷಾಚರಣೆಯನ್ನು ಇತ್ತೀಚೆಗೆ ಆಚರಿಸಿದ್ದೇವೆ. ಮುಂದಿನ 25 ವರ್ಷಗಳಲ್ಲಿ ನಾವು 100 ವರ್ಷ ಪೂರೈಸಲಿದ್ದೇವೆ. ಮುಂದಿನ 25 ವರ್ಷಗಳು ಭಾರತದ ಪಾಲಿಗೆ ಅಮೃತ ಕಾಲ. ಈ ಅವಧಿಯಲ್ಲಿ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಗುರಿಯನ್ನು ಹೊಂದಲಾಗಿದೆ’ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್‌ ಅವರು ಸಮಾವೇಶದ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT