ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಪ್ರದೇಶ:‘ಹನುಮ ದಲಿತ’ ಯೋಗಿ ಆದಿತ್ಯನಾಥ ಹೇಳಿಕೆಗೆ ಸಚಿವ ಓಂ ಪ್ರಕಾಶ್ ವಿರೋಧ

Last Updated 3 ಡಿಸೆಂಬರ್ 2018, 11:33 IST
ಅಕ್ಷರ ಗಾತ್ರ

ಮುಜಾಫರ್‌ನಗರ: ‘ಹನುಮ ದಲಿತ’ ಎಂಬ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಹೇಳಿಕೆಗೆಸಚಿವ ಓಂ ಪ್ರಕಾಶ್ ರಾಜ್‌ಭರ್ ವಿರೋಧ ವ್ಯಕ್ತಪಡಿಸಿದ್ದಾರೆ.

ಶಾಮ್ಲಿ ಜಿಲ್ಲೆಯಲ್ಲಿ ಭಾನುವಾರ ನಡೆದ ಸಾರ್ವಜನಿಕ ಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ‘ದೇವರನ್ನು ಜಾತಿ ಹೆಸರಿನಲ್ಲಿ ವಿಂಗಡಿಸುವುದು ಸರಿಯಲ್ಲ.ಈ ವಿವಾದಾತ್ಮಕ ಹೇಳಿಕೆಯಿಂದಾಗಿ ದಲಿತ ಸಮುದಾಯದವರು ಹನುಮ ದೇವಾಲಯಗಳನ್ನು ಸ್ವಾಧೀನಪಡಿಸಿಕೊಳ್ಳಲು ಒತ್ತಾಯಿಸುತ್ತಿದ್ದಾರೆ’ ಎಂದು ಹೇಳಿದ್ದಾರೆ.

‘ದೇಶದ ಎಲ್ಲ ಹನುಮ ದೇವಸ್ಥಾನಗಳನ್ನು ದಲಿತರು ಸುಪರ್ದಿಗೆ ತೆಗೆದುಕೊಳ್ಳಬೇಕು. ಮತ್ತು ಅಲ್ಲಿ ದಲಿತರನ್ನೇ ಪುರೋಹಿತರಾಗಿ ನೇಮಿಸಕೊಳ್ಳಬೇಕು ಎಂದು’ ಮುಖ್ಯಮಂತ್ರಿ ಹೇಳಿಕೆಗೆ ಭೀಮ್‌ ಆರ್ಮಿ ಸಂಘಟನೆ ಮುಖ್ಯಸ್ಥಚಂದ್ರಶೇಖರ್ ಪ್ರತಿಕ್ರಿಯಿಸಿದ್ದಾರೆ.

ರಾಜಸ್ಥಾನದ ಅಲ್ವರ್‌ನಲ್ಲಿ ನಡೆದ ರ‍್ಯಾಲಿ ಸಂದರ್ಭದಲ್ಲಿ‌ ‘ಹನುಮಂತ ವಂಚಿತ, ದಲಿತ ಮತ್ತು ಅರಣ್ಯವಾಸಿ’ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಈ ಹೇಳಿಕೆ ನೀಡಿದ್ದರು.ಅವರ ಹೇಳಿಕೆಗೆ ಬಿಜೆಪಿ ಮುಖಂಡರಿಂದಲೇ ಪ್ರತಿರೋಧ ವ್ಯಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT