ನವದೆಹಲಿ: ಯೆಸ್ ಬ್ಯಾಂಕ್‌ಗೆ ಸಂಬಂಧಿಸಿದ ವಂಚನೆ ಪ್ರಕರಣ ಕುರಿತು ಅಕ್ರಮ ಹಣ ವರ್ಗಾವಣೆಗೆ ಸಂಬಂಧ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು, ಮುಂಬೈ ಮೂಲದ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರಿಗೆ ಸೇರಿದ ಕನಿಷ್ಠ 10 ಸ್ಥಳಗಳ ಮೇಲೆ ದಾಳಿ ನಡೆಸಿದ್ದಾರೆ.

ಮುಂಬೈನಲ್ಲಿ ಓಂಕಾರ್ ರಿಯಲ್ಟರ್ಸ್ ಅಂಡ್ ಡೆವಲಪರ್ಸ್ ಸಂಸ್ಥೆಗೆ ಸೇರಿದ 7 ವಸತಿಗಳು ಮತ್ತು 3 ಕಚೇರಿಗಳ ಮೇಲೆ ದಾಳಿ ನಡೆದಿದೆ ಎಂದು ತಿಳಿಸಿದರು. ಈ ಕುರಿತು ಪ್ರತಿಕ್ರಿಯೆಗೆ ರಿಯಲ್ ಎಸ್ಟೇಟ್ ಸಂಸ್ಥೆಯ ಪ್ರತಿನಿಧಿಗಳು ಲಭ್ಯರಾಗಲಿಲ್ಲ.

ಸಮೂಹವನ್ನು ಅಧ್ಯಕ್ಷ ಕಮಲ್ ಕಿಶೋರ್ ಗುಪ್ತಾ ಸ್ಥಾಪಿಸಿದ್ದು, ಬಾಬುಲಾಲ್ ವರ್ಮಾ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಈ ಸಮೂಹವು ಕೊಳೆಗೇರಿ ನಿರ್ಮೂಲನಾ ಪ್ರಾಧಿಕಾರದ ಯೋಜನೆಯ ದುರ್ಬಳಕೆ ಮಾಡಿದ್ದು, ಯೆಸ್ ಬ್ಯಾಂಕ್‌ನಿಂದ ಪಡೆದಿದ್ದ ₹ 450 ಕೋಟಿಯನ್ನು ಅನ್ಯ ಉದ್ದೇಶಕ್ಕೆ ಬಳಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.