ನವದೆಹಲಿ: ಜೈಡಸ್ ಕ್ಯಾಡಿಲಾ ಕಂಪನಿಯ ವೈರಸ್ ಪ್ರತಿರೋಧಕ ಔಷಧಿ ‘ವಿರಾಫಿನ್’ ಅನ್ನು ಕೋವಿಡ್ ರೋಗಿಗಳ ತುರ್ತು ಬಳಕೆಗಾಗಿ ಭಾರತೀಯ ಪ್ರಧಾನ ಔಷಧ ನಿಯಂತ್ರಕ (ಡಿಸಿಜಿಐ) ಇಲಾಖೆ ಶುಕ್ರವಾರ ಅನುಮತಿ ನೀಡಿದೆ.

ಸೌಮ್ಯ ಲಕ್ಷಗಳು ಇರುವ ವಯಸ್ಕ ಕೋವಿಡ್ ರೋಗಿಗಳಿಗೆ ‘ವಿರಾಫಿನ್’ ಔಷಧಿಯನ್ನು ಮಿತಿಗೆ ಒಳಪಟ್ಟು ತುರ್ತು ಬಳಕೆಗೆ ನೀಡಲು ಡಿಸಿಜಿಐ ಅನುಮತಿ ನೀಡಿದೆ ಎಂದು ಜೈಡಸ್ ಕ್ಯಾಡಿಲಾ ಕಂಪನಿತಿಳಿಸಿದೆ.

ಸೌಮ್ಯ ಲಕ್ಷಗಳು ಇರುವ ಕೋವಿಡ್ ರೋಗಿಗಳ ಚಿಕಿತ್ಸೆಗೆ ಈ ಔಷಧಿ ಹೆಚ್ಚು ಪರಿಣಾಮಕಾರಿಯಾಗಿದೆ.ಆರಂಭದಲ್ಲೇ ಈ ಔಷಧಿ ನೀಡುವುದರಿಂದ ಕೋವಿಡ್ ರೋಗಿಗಳು ವೇಗವಾಗಿ ಚೇತರಿಸಿಕೊಳ್ಳಲುಮತ್ತು ಹೆಚ್ಚಿನ ಅಪಾಯ ತಪ್ಪಿಸಲು ಸಹಕಾರಿಯಾಗಿದೆ ಎಂದು ಕ್ಯಾಡಿಲಾ ಕಂಪನಿ ತಿಳಿಸಿದೆ.

ವೈದ್ಯಕೀಯ ತಜ್ಞರ ಸಲಹೆಯ ಮೇಲೆ ‘ವಿರಾಫಿನ್’ ನೀಡಬಹುದು. ಈ ಔಷಧ ಭಾರತೀಯಮಾರುಕಟ್ಟೆಯಲ್ಲಿ ಲಭ್ಯವಿದೆ.

ಭಾರತದಾದ್ಯಂತ 20-25 ಕೇಂದ್ರಗಳಲ್ಲಿ ‘ವಿರಾಫಿನ್’ ಬಳಕೆಯ ಪ್ರಯೋಗವನ್ನು ನಡೆಸಲಾಗಿದೆ. ಇದುಆಮ್ಲಜನಕದ ಕಡಿಮೆ ಅಗತ್ಯವನ್ನು ತೋರಿಸಿದೆ. ಹಾಗೇ ಉಸಿರಾಟದ ತೊಂದರೆ ನಿಯಂತ್ರಿಸಲು ಈ ಔಷಧಿ ಸಮರ್ಥವಾಗಿದೆ ಎಂದು ಕಂಪನಿ ಸ್ಪಷ್ಟಪಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.