ನವದೆಹಲಿ (ಪಿಟಿಐ): ದೇಶದಲ್ಲಿನ ಎಲ್ಲಾ ಕಾವಲು ರಹಿತ ಲೆವೆಲ್ ಕ್ರಾಸಿಂಗ್ಗಳನ್ನು ತೆರವುಗೊಳಿಸಿ ಬದಲಿ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ `ಭಾರತೀಯ ರೈಲು- ರಸ್ತೆ ಮಾರ್ಗ ವಿಭಜಕ ನಿಗಮ~ ಸ್ಥಾಪಿಸುವ ಇಂಗಿತವನ್ನು ರೈಲ್ವೆ ಸಚಿವ ದಿನೇಶ್ ತ್ರಿವೇದಿ ಬಜೆಟ್ನಲ್ಲಿ ವ್ಯಕ್ತಪಡಿಸಿದ್ದಾರೆ.

ರೈಲು ಅಪಘಾತ ಪ್ರಕರಣಗಳಲ್ಲಿ ಶೇ 40ರಷ್ಟು ಅಪಘಾತಗಳು ಕಾವಲು ರಹಿತ ಲೆವೆಲ್ ಕ್ರಾಸಿಂಗ್ಗಳಲ್ಲಿ ಸಂಭವಿಸುತ್ತಿವೆ. ಇದು ಕಳವಳಕಾರಿ ಬೆಳವಣಿಗೆ. ಆದ್ದರಿಂದ ಮುಂದಿನ ಐದು ವರ್ಷಗಳಲ್ಲಿ ದೇಶದಲ್ಲಿರುವ ಎಲ್ಲ ಕಾವಲು ರಹಿತ ಲೆವೆಲ್ ಕ್ರಾಸಿಂಗ್ಗಳಿಗೆ ಮುಕ್ತಿ ನೀಡಲಾಗುವುದು. ಈ ವಿಶೇಷ ನಿರ್ದಿಷ್ಟ ಉದ್ದೇಶವನ್ನು ಸಾಕಾರಗೊಳಿಸಲು `ರೈಲು- ರಸ್ತೆ ಮಾರ್ಗ ವಿಭಜಕ ನಿಗಮ~ವನ್ನು ಅನುಷ್ಠಾನಗೊಳಿಸಲಾಗುವುದು ಎಂದು ತ್ರಿವೇದಿ ಹೇಳಿದ್ದಾರೆ.

ಕಾವಲು ರಹಿತ ಲೆವೆಲ್ ಕ್ರಾಸಿಂಗ್ಗಳ ಬದಲಿಗೆ ರೈಲ್ವೆ ಮೇಲುಸೇತುವೆ ಅಥವಾ ಕೆಳ ಸೇತುವೆಗಳನ್ನು ನಿರ್ಮಿಸುವ ಉದ್ದೇಶ ಇದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.