ನವದೆಹಲಿ (ಐಎಎನ್‌ಎಸ್): ಬಾಲಾಪರಾಧಿಗಳನ್ನು ಅಪರಾಧಿಕ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಡಿಸದಂತೆ ಪ್ರತಿಬಂಧಿಸುವ ಬಾಲ ನ್ಯಾಯ ಕಾಯ್ದೆಯ ನಿಬಂಧನೆಗಳನ್ನು ತೆಗೆದು ಹಾಕಬೇಕೆಂಬ ಮನವಿ ಕುರಿತಂತೆ ಸುಪ್ರೀಂ ಕೋರ್ಟ್ ಸೋಮವಾರ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.

ದೇಶದ ಗಮನ ಸೇಳೆದ ದೆಹಲಿ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಾವಿಗೀಡಾದ ವೈದ್ಯಕೀಯ ವಿದ್ಯಾರ್ಥಿನಿಯ ತಂದೆ ಪರ ನ್ಯಾಯಮೂರ್ತಿ ಬಿ.ಎಸ್.ಚೌವ್ಹಾಣ್ ಮತ್ತು ಎಸ್.ಎ.ಬೊಬ್ಡೆ ಅವರನ್ನು ಒಳಗೊಂಡ ನ್ಯಾಯಪೀಠದ ಎದುರು ಹಾಜರಾದ ವಕೀಲ ಅಮನ್ ಹಿಂಗೊರಾಣಿ ಅವರ ಮನವಿಯ ಮೇರೆಗೆ ನ್ಯಾಯಾಲಯವು ನೋಟಿಸ್ ಜಾರಿಗೊಳಿಸಿತು.

ವಿಚಾರಣೆ ವೇಳೆ ಹಿಂಗೊರಾಣಿ ಅವರು ಬಾಲ ನ್ಯಾಯ ಕಾಯ್ದೆಯ ಸೆಕ್ಷನ್ 82 ಮತ್ತು 82ರ ಅಡಿಯಲ್ಲಿ ಓರ್ವ ಬಾಲಾಪರಾಧಿಯನ್ನು ಮ್ಯಾಜಿಸ್ಟ್ರೇಟ್ ಎದುರು ಹಾಜರುಪಡಿಸಿದಾಗ ಆತ ಹದಿನೆಂಟು ವರ್ಷಕ್ಕೂ ಮೇಲ್ಪಟ್ಟವನೋ ಅಥವಾ ಅದಕ್ಕೂ ಒಳಗಿನವನೋ ಎನ್ನುವುದನ್ನು ಖಚಿತಪಡಿಸಿಕೊಂಡ ನಂತರವೇ ಆತ ನನ್ನು ಬಾಲಾಪರಾಧ ನ್ಯಾಯ ಮಂಡಳಿ ಇಲ್ಲವೇ, ವಿಚಾರಣಾ ನ್ಯಾಯಾಲಯದ ವಶಕ್ಕೆ ಒಪ್ಪಿಸಬೇಕು. ಇದು 16ರಿಂದ 18 ವಯಸ್ಸಿನಲ್ಲಿರುವ ಆರೋಪಿಗಳಿಗೆ ರಕ್ಷಣೆ ಒದಗಿಸುತ್ತದೆ ಎಂದು ಹೇಳಿದರು.

ಪ್ರಕರಣದ ತೀವ್ರತೆ, ಆರೋಪಿ ಮಾನಸಿಕ ಪ್ರಬುದ್ಧತೆ, ಆರೋಪಿಗೆ ತನ್ನ ಅಪರಾಧ ಕುರಿತಾದ ಕಾಯ್ದೆಯಿಂದಾಗುವ ಪರಿಣಾಮದ ತಿಳುವಳಿಕೆ ಈ ಎಲ್ಲ ಅಂಶಗಳಿಗೆ ಮ್ಯಾಜಿಸ್ಟ್ರೇಟ್ ಗಮನ ಹರಿಸಬೇಕು ಎಂದು ಹಿಂಗೊರಾಣಿ ಹೇಳಿದರು.

ಇದೇ ವೇಳೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯಕ್ಕೆ ಕೂಡ ನೋಟಿಸ್ ಜಾರಿಗೊಳಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.