ಮುಂಬೈ (ಐಎಎನ್‌ಎಸ್): ದೇಶಕ್ಕೆ ಅಂಟಿರುವ ಸಮಸ್ಯೆಗಳನ್ನು ಪರಿಹರಿಸಲು ಜನರು ಕಾಂಗ್ರೆಸ್‌ನ ಕಪಿಮುಷ್ಟಿಯಿಂದ ಭಾರತವನ್ನು ಮುಕ್ತಗೊಳಿಸಬೇಕು ಎಂದು ಬಿಜೆಪಿ ಪ್ರಧಾನಮಂತ್ರಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಭಾನುವಾರ ಹೇಳಿದರು.

ಬಿಕೆಸಿ ಮೈದಾನದಲ್ಲಿ ನಡೆದ ಬೃಹತ್ ರ‌್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಮಹಾರಾಷ್ಟ್ರ ಮತ್ತು ಗುಜರಾತ್ ಈ ಎರಡು ರಾಜ್ಯಗಳು ಮೇ1, 1960ರಂದು ಜನ್ಮತಳೆದಿವೆ. ಆದರೆ, ಇವರೆಗೆ ಗುಜರಾತ್‌ನಲ್ಲಿ 14 ಮುಖ್ಯಮಂತ್ರಿಗಳು ಆಡಳಿತ ನಡೆಸಿದರೆ, ಮಹಾರಾಷ್ಟ್ರ 26 ಮುಖ್ಯಮಂತ್ರಿಗಳನ್ನು ಕಂಡಿದೆ ಎಂದು ತಿಳಿಸಿದರು.

`ಇಲ್ಲಿ (ಮಹಾರಾಷ್ಟ್ರದಲ್ಲಿ) ಯಾವ ರೀತಿಯ ಸರ್ಕಾರವಿದೆ? ಒಬ್ಬ ಸಿಎಂ ಬಂದರೆ, ಮತ್ತೊರ್ವ ಅವನನ್ನು ಹೊರಗಟ್ಟಲು ಬೆನ್ನತ್ತಿ ಪ್ರಯತ್ನಿಸುತ್ತಾನೆ' ಅಲ್ಲದೇ, ಅಧಿಕಾರಕ್ಕಾಗಿ ಕಾಂಗ್ರೆಸ್ ಒಡೆದು ಆಳುವ ನೀತಿಯನ್ನು ಬಳಸುತ್ತಾ ಬರುತ್ತಿದೆ ಎಂದು ಹೇಳಿದರು.

`ಒಂದುವೇಳೆ ನಾವು ದೇಶವನ್ನು ಕಾಡುತ್ತಿರುವ ಸಮಸ್ಯೆಗಳಿಂದ ಬಿಡುಗಡೆ ಹೊಂದಬೇಕೆಂದು ಬಯಸಿದರೆ ಮೊದಲು ಕಾಂಗ್ರೆಸ್‌ನ ಬಿಗಿಮುಷ್ಟಿಯಿಂದ ಬಿಡುಗಡೆ ಹೊಂದಬೇಕು' ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.