ನವದೆಹಲಿ (ಪಿಟಿಐ): ತನ್ನಿಂದ ನೇಮಕಗೊಂಡ ಕೇಂದ್ರೀಯ ವಿಶೇಷಾಧಿಕಾರ ಸಮಿತಿ (ಸಿಇಸಿ) ನೀಡಿರುವ ಗಣಿಗಾರಿಕೆ ಸಂಬಂಧಿತ ಶಿಫಾರಸುಗಳನ್ನು ಸುಪ್ರೀಂಕೋರ್ಟ್ ಶುಕ್ರವಾರ ಅಂಗೀಕರಿಸಿತು.

ಈಗಾಗಲೇ ನೀಡಲಾಗಿರುವ ಗಣಿ ಗುತ್ತಿಗೆಗಳಲ್ಲಿ ಮರುವಸತಿ ಯೋಜನೆಗಳನ್ನು ಅನುಷ್ಠಾನಗೊಳಿಸುವವರೆಗೆ ಕರ್ನಾಟಕದ ಬಳ್ಳಾರಿ, ತುಮಕೂರು, ಚಿತ್ರದುರ್ಗ ಜಿಲ್ಲೆಗಳಲ್ಲಿ ಹೊಸ ಗಣಿಗಾರಿಕೆ ಗುತ್ತಿಗೆಗಳನ್ನು ನೀಡಬಾರದು ಎಂಬುದಾಗಿ ಸಿಇಸಿ ಶಿಫಾರಸು ಮಾಡಿತ್ತು.

ಮುಖ್ಯ ನ್ಯಾಯಮೂರ್ತಿ ಎಸ್.ಎಚ್. ಕಪಾಡಿಯಾ ನೇತೃತ್ವದ ಅರಣ್ಯ ಪೀಠವು ~ಎಲ್ಲ ವರ್ಗದ ಗಣಿಗಾರಿಕೆಗಳಲ್ಲಿ ಮರುವಸತಿ ಯೋಜನೆಯನ್ನು ತತ್ ಕ್ಷಣವೇ ಜಾರಿಗೊಳಿಸುವಂತೆ ನಿರ್ದೇಶನ ನೀಡಿತು. ಮರುವಸತಿ ಯೋಜನೆಯ ಸಿದ್ಧತೆ, ಜಾರಿ ಮತ್ತು ನಿಗಾವನ್ನು ಸಿಇಸಿಯ ಮೇಲುಸ್ತುವಾರಿಯಲ್ಲಿ ಕೈಗೊಳ್ಳಬೇಕು ಎಂದೂ ಪೀಠವು ಸೂಚಿಸಿತು.

ನ್ಯಾಯಮೂರ್ತಿ ಆಫ್ತಾಬ್ ಆಲಂ ಮತ್ತು ಸ್ವತಂತ್ರ ಕುಮಾರ್ ಅವರನ್ನೂ ಒಳಗೊಂಡ ಪೀಠವು ಸ್ಟಾಕ್ ಯಾರ್ಡ್ ಗಳ ವಿಲೇವಾರಿ ಬಗ್ಗೆ ಸಲಹೆಗಳನ್ನು ನೀಡುವಂತೆಯೂ ಸಿವಿಸಿಗೆ ಪೀಠ ಸೂಚನೆ ನೀಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.