ಅಹಮದಾಬಾದ್ (ಪಿಟಿಐ): ಒಟ್ಟು 59 ಜನ ಸಜೀವವಾಗಿ ದಹನಗೊಂಡ ಗೋಧ್ರಾ ರೈಲು ಹತ್ಯಾಕಾಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತ್ವರಿತ ನ್ಯಾಯಾಲಯವು ಈಚೆಗೆ ಗುರುತಿಸಿದ್ದ 31 ಮಂದಿ ತಪ್ಪಿತಸ್ಥರಲ್ಲಿ, ಮಂಗಳವಾರ 11 ಮಂದಿಗೆ ಗಲ್ಲು ಮತ್ತು 20 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

ಕಳೆದ 2002ರ ಫೆ. 27ರಂದು ಅಯೋಧ್ಯೆಯಿಂದ ಕರಸೇವೆ ಮುಗಿಸಿಕೊಂಡು ಸಬರಮತಿ ಎಕ್ಸ್ಪ್ರೆಸ್ ರೈಲಿನಲ್ಲಿ ಹಿಂದಿರುಗುತ್ತಿದ್ದ 59 ಮಂದಿ ಕರಸೇವಕರು ಗೋಧ್ರಾ ಬಳಿ ಸಜೀವ ದಹನಗೊಂಡಿದ್ದರು. ಇದಕ್ಕೆ ಪ್ರತಿಯಾಗಿ ಗುಜರಾತ್ ನ ವಿವಿಧೆಡೆ ಭುಗಿಲೆದ್ದ ಗಲಭೆಯಲ್ಲಿ 1200 ಮಂದಿ ಪ್ರಾಣ ಕಳೆದುಕೊಂಡಿದ್ದರು.

~ಈ ಪ್ರಕರಣ ಅಪರೂಪದಲ್ಲಿ ಒಂದು ಅಪರೂಪದ ಪ್ರಕರಣ~ ಎಂದು ಪ್ರಕರಣದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ ವಿಶೇಷ ತ್ವರಿತ ನ್ಯಾಯಾಲಯದ ನ್ಯಾಯಾಧೀಶ ಪಿ.ಆರ್ ಪಾಟೀಲ್ ಅವರು, 31 ಮಂದಿ ತಪ್ಪಿತಸ್ಥರ ಪೈಕಿ 11 ಮಂದಿಗೆ ಗಲ್ಲು ಶಿಕ್ಷೆ ವಿಧಿಸಿದರೆ, 20 ಮಂದಿಗೆ ಜೀವಾವಧಿ ಶಿಕ್ಷೆ ಘೋಷಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.