ನವದೆಹಲಿ: ದೇಶದ ಗಡಿ ಭಾಗದಲ್ಲಿ ಚೀನಾ ಆಕ್ರಮಣ ಮಾಡಲಿದೆ ಎಂಬ ಆತಂಕ ಅನಗತ್ಯ. ಅಂಥ ಯಾವುದೇ ಪರಿಸ್ಥಿತಿ ಗಡಿಯಲ್ಲಿ ಇಲ್ಲ. `ಕಾರ್ಗಿಲ್~ ಮಾದರಿಯ ಸಮರಕ್ಕೆ ಚೀನಾ ಯೋಜನೆ ರೂಪಿಸುತ್ತಿದೆ ಎಂಬುದು ಬರೀ ಕಟ್ಟುಕಥೆ ಎಂದು ಕೇಂದ್ರ ಸರ್ಕಾರದ ಉನ್ನತ ಮೂಲಗಳು ಸ್ಪಷ್ಟಪಡಿಸಿವೆ.

`ಭಾರತದ ಮೇಲೆ ಆಕ್ರಮಣ ಮಾಡುವುದರಿಂದ ಚೀನಾಕ್ಕೆ ಯಾವ ಪ್ರಯೋಜನ ಇಲ್ಲ. ಅಕಸ್ಮಾತ್ ಚೀನಾ ಗಡಿ ಭಾಗದಲ್ಲಿ ಆತಂಕದ ವಾತಾವರಣ ಸೃಷ್ಟಿಸಿದರೆ ನಾವು ಯಾರ ಮಧ್ಯಸ್ಥಿಕೆ ಇಲ್ಲದೆ ನೇರವಾಗಿ ಅದರೊಂದಿಗೆ ವ್ಯವಹರಿಸುತ್ತೇವೆ~ ಎಂದು ಉನ್ನತ ಮೂಲಗಳು ಬುಧವಾರ ಸ್ಪಷ್ಟಪಡಿಸಿವೆ.

1975ರ ಬಳಿಕ ಚೀನಾದಿಂದ ಹೆಚ್ಚು ಗಡಿ ಉಲ್ಲಂಘನೆ ಪ್ರಕರಣಗಳು ನಡೆದಿಲ್ಲ. ಹಿಂದಿನ ಐದು ವರ್ಷಗಳಿಗೆ ಹೋಲಿಸಿದರೆ ಗಡಿ ಉಲ್ಲಂಘನೆ ಪ್ರಕರಣ ಗಣನೀಯವಾಗಿ ಇಳಿದಿದೆ. ಇಂಥ ಪ್ರಕರಣಗಳು ನಡೆದಾಗ ಭಾರತ ಕೂಡಾ ಸೂಕ್ತ ಉತ್ತರ ನೀಡಿದೆ.

ನೆರೆಹೊರೆಯ ಯಾವುದೇ ದೇಶದ ಗಡಿಗಿಂತ ಚೀನಾ ಗಡಿ ಅತ್ಯಂತ ಶಾಂತಿಯುತ. ಹಾಗೆಂದ ಮಾತ್ರಕ್ಕೆ ಚೀನಾ ಜತೆ ತಂಟೆಯೇ ಇಲ್ಲವೆಂದಲ್ಲ. ಗಡಿ ಸಮಸ್ಯೆ ಸೇರಿದಂತೆ ಹಲವು ವಿವಾದಗಳಿವೆ. ಇವುಗಳಿಗೆ ಪರಿಹಾರ ಕಂಡುಕೊಳ್ಳಲು ಎರಡು ದೇಶಗಳು ಗಂಭೀರವಾಗಿ ಪ್ರಯತ್ನಿಸುತ್ತಿವೆ.

ಚೀನಾ `ಕಾರ್ಗಿಲ್~ ಮಾದರಿ ಯುದ್ಧಕ್ಕೆ ಪ್ರಯತ್ನಿಸುತ್ತಿದೆ ಎಂಬುದು ಕೇವಲ ಮಾಧ್ಯಮಗಳ ಸೃಷ್ಟಿ. ಇವೆಲ್ಲ ಕಪೋಲಕಲ್ಪಿತ ಕಥೆ. ಆಧಾರವಿಲ್ಲದೆ ಮಾಧ್ಯಮಗಳು ಅತೀ ರಂಜಿತ ವರದಿ ಮಾಡುತ್ತಿವೆ ಎಂದು ಮೂಲಗಳು ಅಭಿಪ್ರಾಯಪಟ್ಟಿವೆ.

ಭಾರತ ಮತ್ತು ಚೀನಾ ಕಿತ್ತಾಡಿದರೆ ಅದನ್ನು ಕಂಡು ಸಂಭ್ರಮಿಸುವ ರಾಷ್ಟ್ರಗಳು ನಮ್ಮ ನಡುವೆ ಇವೆ. ಭಾರತಕ್ಕಿಂತ ಚೀನಾದೊಂದಿಗೆ ಒಳ್ಳೆ ಸಂಬಂಧ ಹೊಂದಿರುವ ಪಾಕಿಸ್ತಾನ ಈ ಪರಿಸ್ಥಿತಿಯ ಲಾಭ ಪಡೆಯಲಿದೆ ಎಂದು ಮೂಲಗಳು ವ್ಯಾಖ್ಯಾನ ಮಾಡಿವೆ. ಭಾರತ ಮತ್ತು ಪಾಕಿಸ್ತಾನ ಸಂಬಂಧ ಸುಧಾರಣೆ ಕಸರತ್ತುಗಳನ್ನು ಮುಂದುವರಿಸಿವೆ.

ಥಿಂಪು ಸಮ್ಮೇಳನದ ಬಳಿಕ ಉಭಯ ದೇಶಗಳ ನಡುವೆ ದ್ವಿಪಕ್ಷೀಯ ಮಾತುಕತೆಗಳು ಪುನರಾರಂಭವಾಗಿದೆ. ವಿದೇಶಾಂಗ ಕಾರ್ಯದರ್ಶಿಗಳು ಮತ್ತು ವಿದೇಶಾಂಗ ಸಚಿವರು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಸದ್ಯದಲ್ಲೇ ನಡೆಯುವ ಸಾರ್ಕ್ ಸಮ್ಮಳನದ ಬದಿಯಲ್ಲಿ ಎರಡು ರಾಷ್ಟ್ರಗಳ ಮುಖಂಡರು ಮುಖಾಮುಖಿ ಆಗಲಿದ್ದಾರೆ. ಎಂದು ಭಾರತವು ಪಾಕಿಸ್ತಾನದ ನೆಚ್ಚಿನ ದೇಶವಾಗಿ ಹೊರಹೊಮ್ಮುತ್ತಿದೆ.

ನಮ್ಮ ಜತೆಗಿನ ವ್ಯಾಪಾರ ಸಂಬಂಧವನ್ನು ವೃದ್ಧಿಸಿ ಬಲಪಡಿಸಬೇಕು ಎಂಬ ಇರಾದೆ ಆ ದೇಶದ ವ್ಯಾಪಾರ ಮತ್ತು ಉದ್ಯಮ ವಲಯದಲ್ಲಿದೆ. ರಾಜಕೀಯ ಮುಖಂಡರೂ ಇದಕ್ಕೆ ಹೆಚ್ಚಿನ ವಿರೋಧ ವ್ಯಕ್ತಪಡಿಸುತ್ತಿಲ್ಲ. ನಮ್ಮಲ್ಲೂ ಇಂತಹದೇ ಭಾವನೆ ಇದೆ. ಈ ಹಿನ್ನೆಲೆಯಲ್ಲಿ ವೀಸಾ ನೀಡಿಕೆಗಿರುವ ಕಟ್ಟುಪಾಡುಗಳನ್ನು ಸಡಿಲಿಸಲಾಗುತ್ತಿದೆ.

ಎರಡು ದೇಶಗಳ ಮಾತುಕತೆಯಲ್ಲಿ ಸಾಕಷ್ಟು ಪ್ರಗತಿಯೇನೋ ಕಂಡಿದೆ. ಆದರೆ, ಉತ್ತಮ ಸಂಬಂಧ ಹೊಂದುವ ನಿರೀಕ್ಷೆ ಫಲ ಕೊಡಲು ಇನ್ನು ಸಾಕಷ್ಟು ದೂರ ಕ್ರಮಿಸಬೇಕಾಗಿದೆ ಎಂದು ಮೂಲಗಳು ವ್ಯಾಖ್ಯಾನಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.