ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಖಡ್‌ ಪತ್ನಿ ಹೆಸರಲ್ಲಿ ಸ್ವಿಸ್‌ ಖಾತೆ

Last Updated 17 ಮೇ 2019, 20:15 IST
ಅಕ್ಷರ ಗಾತ್ರ

ಗುರುದಾಸ್‌ಪುರ: ಪಂಜಾಬ್‌ನ ಗುರುದಾಸ್‌ಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಸುನಿಲ್‌ ಜಾಖಡ್‌ ಅವರು ತಮ್ಮಲ್ಲಿ ₹1.53 ಕೋಟಿ ಮೌಲ್ಯದ ಚರಾಸ್ತಿ ಇದೆ ಎಂದು ಘೋಷಿಸಿದ್ದಾರೆ. ಜತೆಗೆ, ತಮ್ಮ ಹೆಂಡತಿ ಸಿಲ್ವಿಯಾ ಜಾಖಡ್‌ ಹೆಸರಲ್ಲಿ ಸ್ವಿಸ್‌ ಬ್ಯಾಂಕ್‌ ಖಾತೆ ಇದೆ. ಈ ಖಾತೆಯಲ್ಲಿ ₹7.37 ಕೋಟಿ ಠೇವಣಿ ಇದೆ ಎಂದೂ ಅವರು ಹೇಳಿದ್ದಾರೆ.

ಮಧ್ಯ ಪ್ರದೇಶದ ಮಾಜಿ ರಾಜ್ಯಪಾಲ ಬಲರಾಂ ಜಾಖಡ್‌ ಮಗನಾಗಿರುವ ಸುನಿಲ್‌ ಅವರು ವಿವಿಧ ಬ್ಯಾಂಕ್‌ಗಳ ಖಾತೆಯಲ್ಲಿ ₹1.23 ಕೋಟಿ ಠೇವಣಿ ಇರಿಸಿದ್ದಾಗಿಯೂ ತಿಳಿಸಿದ್ದಾರೆ.

ಝರ್ಚರ್‌ ಕಂಟೋನಲ್‌ ಬ್ಯಾಂಕ್‌ನಲ್ಲಿ ಸಿಲ್ವಿಯಾ ಅವರ ಖಾತೆ ಇದೆ. ಆ ಬ್ಯಾಂಕ್‌ನ ವೆಬ್‌ಸೈಟ್‌ ಪ್ರಕಾರ, ಸ್ವಿಟ್ಜರ್‌ಲ್ಯಾಂಡ್‌
ನ ಅತ್ಯಂತ ದೊಡ್ಡ ಬ್ಯಾಂಕ್‌ ಇದು.ಗುರುದಾಸ್‌ಪುರದ ಹಾಲಿ ಸಂಸದರಾಗಿರುವ ಸುನಿಲ್‌ ಅವರು ಮರುಆಯ್ಕೆ ಬಯಸಿದ್ದಾರೆ. ಬಾಲಿವುಡ್‌ ನಟ ಸನ್ನಿಡಿಯೋಲ್‌ ಅವರು ಇಲ್ಲಿ ಬಿಜೆಪಿ ಅಭ್ಯರ್ಥಿ. ಇದೇ ಭಾನುವಾರ ಈ ಕ್ಷೇತ್ರದಲ್ಲಿ ಮತದಾನ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT