ನವದೆಹಲಿ(ಪಿಟಿಐ): ಬಿಹಾರದ ರಾಜಧಾನಿ ಪಟ್ನಾದಲ್ಲಿ ಕಳೆದ ವರ್ಷ ನರೇಂದ್ರ ಮೋದಿ ಸಭೆಗೂ ಮುನ್ನ ಸಂಭವಿಸಿದ್ದ ಸರಣಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ದುಷ್ಕೃತ್ಯದ ಹಿಂದಿನ ರೂವಾರಿ ಎನ್ನಲಾದ ಹೈದರ್ ಅಲಿ ಅಲಿಯಾಸ್ ‘ಬ್ಲ್ಯಾಕ್ ಬ್ಯೂಟಿ’ ಸೇರಿದಂತೆ ನಾಲ್ವರನ್ನು ರಾಷ್ಟ್ರೀಯ ತನಿಖಾ ದಳದ (ಎನ್ಐಎ) ಅಧಿಕಾರಿಗಳು ಬಂಧಿಸಿದ್ದಾರೆ.