ನವದೆಹಲಿ (ಪಿಟಿಐ): ರಾಜಧಾನಿಯಲ್ಲಿ ಗುರುವಾರ ಭಾರಿ ಪ್ರಮಾಣದ ಖೋಟಾನೋಟು ಪತ್ತೆ ವೇಳೆ ಬಂಧಿಸಿದ ಇಬ್ಬರಲ್ಲಿ ಒಬ್ಬ ಪಾಕಿಸ್ತಾನದ ಕುಖ್ಯಾತ ಖೋಟಾನೋಟು ಚಲಾವಣೆಗಾರ ಇಕ್ಬಾಲ್ ಕಾನಾನನ್ನು ಭೇಟಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಖೋಟಾ ಹಣವನ್ನು ಇಕ್ಬಾಲನೇ ರವಾನಿಸಿದ್ದ. ಈತನಿಗೆ ಐಎಸ್‌ಐ ನಿಕಟ ಸಂಪರ್ಕವೂ ಇರಬಹುದೆಂದು ಅವರು ಶಂಕಿಸಿದ್ದಾರೆ. ದಬ್ರೀ ಪ್ರದೇಶದ ಗೋದಾಮಿನ ಬಳಿ ಎರಡು ಟೆಂಪೋಗಳಲ್ಲಿ ಬಟ್ಟೆ ಬಂಡಲ್‌ಗಳಲ್ಲಿ ಈ ಹಣ ಇಡಲಾಗಿತ್ತು. ಈ ಬಟ್ಟೆಯ ಬಂಡಲ್‌ಗಳಿಗೆ ಅಂಟಿಸಲಾಗಿದ್ದ ಕಾಗದದ ಹೊದಿಕೆ ಮೇಲೆ ಪಾಕಿಸ್ತಾನದ ಫೈಜಲಾಬಾದ್‌ನ ಐದು ಕಂಪೆನಿಗಳ ಹೆಸರು ಇತ್ತು. ಇದು ಈ ಖೋಟಾನೋಟುಗಳ ಹಿಂದೆ ಪಾಕಿಸ್ತಾನದ ಕೈವಾಡದ ಬಗ್ಗೆ ಸಂಶಯ ಮೂಡಿಸಿತ್ತು ಎಂದು ವಿವರಿಸಿದ್ದಾರೆ.

ಆಶ್ ಮೊಹಮ್ಮದ್ ಮತ್ತು ಜೀಶನ್ ಖಾನ್ ಬಂಧಿತರಾಗಿದ್ದು ಇವರಲ್ಲಿ ಆಶ್ ಮೊಹಮ್ಮದ್ ಪಾಕಿಸ್ತಾನದ ಕುಖ್ಯಾತನನ್ನು ಭೇಟಿಯಾಗಿದ್ದ ಎಂದಿದ್ದಾರೆ. ಈ ಮುನ್ನ, ಪೊಲೀಸರು 6 ಕೋಟಿ ರೂಪಾಯಿಗೂ ಹೆಚ್ಚಿನ ಖೋಟಾಹಣ ವಶಪಡಿಸಿಕೊಂಡಿರುವುದಾಗಿ ಹೇಳಿದ್ದರು. ಆದರೆ ನಂತರ ಸ್ಪಷ್ಟನೆ ನೀಡಿ ವಶಪಡಿಸಿಕೊಂಡ ಮೊತ್ತ 2.24 ಕೋಟಿ ರೂಪಾಯಿ ಎಂದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.