ಕೊಲ್ಲಾಪುರ (ಪಿಟಿಐ): 2 ಜಿ ತರಂಗಾಂತರ ಹಗರಣದ ಸಂಬಂಧ ಸಿಬಿಐನಿಂದ ಬಂಧಿತನಾಗಿರುವ ಡಿಬಿ ರಿಯಾಲ್ಟಿಯ ವ್ಯವಸ್ಥಾಪಕ ನಿರ್ದೇಶಕ ಶಾಹಿದ್ ಉಸ್ಮಾನ್ ಬಲ್ವಾಗೂ ತನಗೂ ಸಂಪರ್ಕವಿದೆ ಎಂಬ ಮಾಧ್ಯಮ ವರದಿಗಳನ್ನು ಕೇಂದ್ರ ಕೃಷಿ ಸಚಿವ ಶರದ್ ಪವಾರ್ ತಳ್ಳಿಹಾಕಿದ್ದಾರೆ.‘ಮಾಧ್ಯಮಗಳಲ್ಲೇ ವರದಿಯಾಗಿರುವ ಪ್ರಕಾರ ಆತನ ವಯಸ್ಸು 32. ನನ್ನ ವಯಸ್ಸು ಈಗ 70. ನಾನು ಆತನಿಗೆ ಸ್ನೇಹಿತನಾಗಲು ಹೇಗೆ ಸಾಧ್ಯ?’- ಎಂದು ಎನ್‌ಸಿಪಿ ಮುಖಂಡ ಕೇಳಿದ್ದಾರೆ.

ಬಾರಾಮತಿಯಲ್ಲಿರುವ ತಮಗೆ ಸೇರಿದ ಜಾಗದಲ್ಲಿದೆ ಎನ್ನಲಾದ ಡೈನಾಮಿಕ್ಸ್ ಡೈರಿ ಇಂಡಸ್ಟ್ರೀಸ್ ಲಿಮಿಟೆಡ್‌ನಲ್ಲಿ ಬಲ್ವಾ ಪಾಲುದಾರಿಕೆ ಇದೆ ಎಂಬ ವರದಿಗಳನ್ನೂ ಅವರು ನಿರಾಕರಿಸಿದ್ದಾರೆ. ಅಮೆರಿಕದ ಸ್ಕ್ರೀಬರ್ ಫುಡ್ಸ್ ಇಂಕ್. ಎಂಬ ಕಂಪೆನಿ ಈ ಡೈರಿಯ ಒಡೆತನ ಹೊಂದಿದ್ದು ಇದರಲ್ಲಿ ಬೇರ್ಯಾರೂ ಪಾಲುದಾರಿಕೆ ಹೊಂದಿಲ್ಲ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ. ಬಾರಾಮತಿಯ ರೈತರು ಕಳೆದ 30 ವರ್ಷಗಳಿಂದ ಈ ಡೈರಿಗೆ ಹಾಲು ಪೂರೈಸುತ್ತಿದ್ದಾರೆ. ಈ ಡೈರಿ ಆರಂಭವಾದಾಗ ಬಲ್ವಾ ಕೇವಲ ಎರಡು ವರ್ಷದ ಮಗು ಆಗಿದ್ದ ಎಂದೂ ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.