ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಕಂಪ: ಮತ್ತೆ 20 ಶವಗಳ ಪತ್ತೆ

Last Updated 21 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಮಂಗಾನ್/ಸಿಕ್ಕಿಂ (ಪಿಟಿಐ): ಭೂಕಂಪದಿಂದ ನೆಲಸಮವಾದ ಅವಶೇಷಗಳ ಅಡಿಯಿಂದ ಬುಧವಾರ ಮತ್ತೆ 20 ಶವಗಳನ್ನು ಹೊರತೆಗೆಯಲಾಗಿದ್ದು, ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 116ಕ್ಕೆ ಏರಿದೆ.

ಸಿಕ್ಕಿಂ ರಾಜ್ಯವೊಂದರಲ್ಲಿಯೇ ಮೃತರ ಸಂಖ್ಯೆ 53ರಿಂದ 73ಕ್ಕೆಏರಿಕೆಯಾಗಿದೆ. 300ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪರಿಹಾರ ಕಾರ್ಯಾಚರಣೆಗೆ ಪ್ರತಿಕೂಲ ಹವಾಮಾನ ಅಡ್ಡಿಯಾಗಿದ್ದು ತೀವ್ರ ಹಾನಿಗೊಳಗಾಗಿರುವ ಇನ್ನೂ 15 ಗ್ರಾಮಗಳನ್ನು ತಲುಪಲು ಸೇನಾಪಡೆಗೆ ಸಾಧ್ಯವಾಗಿಲ್ಲ.

ಆ ಗ್ರಾಮಗಳಲ್ಲಿ ಶೋಧ ಕಾರ್ಯ ನಡೆದರೆ ಮೃತರಾದವರ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಭೀತಿಪಡಲಾಗಿದೆ.

ಸೇನಾಪಡೆಯ ಸಿಬ್ಬಂದಿ ಇನ್ನೂ ರಸ್ತೆಯಲ್ಲಿ ಹರಡಿಕೊಂಡಿರುವ ಮಣ್ಣು ಮತ್ತು ಕಲ್ಲುಗಳ ತೆರವು ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದು, ಸದ್ಯ 40 ಪ್ರಮುಖ ರಸ್ತೆಗಳನ್ನುತೆರವುಗೊಳಿಸಲಾಗಿದೆ.

ಈ ನಡುವೆ ರಾಜ್ಯದ ಉತ್ತರ ಭಾಗದಲ್ಲಿ ಸುಮಾರು 400 ವಿದೇಶಿ ಪ್ರವಾಸಿಗರು ಸಿಲುಕಿಕೊಂಡಿದ್ದು ಅವರನ್ನು ರಕ್ಷಿಸುವ ಕಾರ್ಯ ಭರದಿಂದ ಸಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT