ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಮಕ್ಕಳ ಲೈಂಗಿಕ ವಿಡಿಯೊಗಳು ಮತ್ತು ಅತ್ಯಾಚಾರ ಅಥವಾ ಸಾಮೂಹಿಕ ಅತ್ಯಾಚಾರ ವಿಡಿಯೊಗಳ ಬಗ್ಗೆ ದೂರು ನೀಡುವುದಕ್ಕೆ ಜನವರಿ 10ರೊಳಗೆ ಪೋರ್ಟಲೊಂದನ್ನು ಸಿದ್ಧಪಡಿಸುವಂತೆ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಈಗಾಗಲೇ ಸೂಚನೆ ನೀಡಿದೆ. ಅಂತರ್ಜಾಲದಲ್ಲಿರುವ ಆಕ್ಷೇಪಾರ್ಹ ಮಾಹಿತಿ, ಚಿತ್ರ ಮತ್ತು ವಿಡಿಯೊಗಳನ್ನು ಸ್ಥಗಿತಗೊಳಿಸುವಲ್ಲಿ ಸರ್ಕಾರ ನೇಮಿಸಿರುವ ನೋಡಲ್ ಸಂಸ್ಥೆ ವಿಫಲವಾಗಿದೆ ಎಂದು ಅರ್ಜಿದಾರರ ಪರ ವಕೀಲ ಸಂಜಯ ಪಾರೇಖ್ ವಾದಿಸಿದರು. ಇಂತಹ ಮಾಹಿತಿ ಸ್ಥಗಿತಗೊಳಿಸುವಲ್ಲಿ ಅಂತರ್ಜಾಲ ಶೋಧ ಸಂಸ್ಥೆಗಳು ವಿಫಲವಾಗಿವೆ ಎಂದೂ ಅವರು ಪ್ರತಿಪಾದಿಸಿದರು.