ಸೋಮವಾರ, 3 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಜಿ ಸಚಿವ ರಾಜಾ ಆರೋಪ: ಸುಳ್ಳು ಸಾಕ್ಷಿಗೆ ಒತ್ತಡ

Last Updated 2 ಜನವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): `2ಜಿ ತರಂಗಾಂತರ ಹಂಚಿಕೆ ಹಗರಣದ ವಿಚಾರಣೆಯಲ್ಲಿ ನನ್ನ ವಿರುದ್ಧ ಸುಳ್ಳು ಸಾಕ್ಷಿ ಹೇಳುವಂತೆ ನನ್ನ ಆಪ್ತ ಸಹಾಯಕರಾಗಿದ್ದ ಆಶೀರ್ವಾದಂ ಆಚಾರ್ಯ ಅವರ ಮೇಲೆ ಸಿಬಿಐ ಒತ್ತಡ ಹೇರಿದೆ~ ಎಂದು ದೂರಸಂಪರ್ಕ ಮಾಜಿ ಸಚಿವ ಎ.ರಾಜಾ ಸೋಮವಾರ ಕೋರ್ಟ್ ಮುಂದೆ ಆರೋಪಿಸಿದರು.

 ಈ ಪ್ರಕರಣದ ಇತರ ಆರೋಪಿಗಳಿಗೂ ತಮಗೂ ಯಾವುದೇ ಸಂಬಂಧ ಹುಡುಕುವಲ್ಲಿ ತನಿಖಾ ತಂಡ ವಿಫಲವಾಗಿದೆ. ಹಾಗಾಗಿ ಸುಳ್ಳು ಸಾಕ್ಷಿ ಹೇಳುವಂತೆ ಆಚಾರ್ಯ ಅವರ ಮೇಲೆ ಒತ್ತಡ ಹಾಕುತ್ತಿದೆ ಎಂದು ಅವರು ದೂರಿದರು.

 ಆದರೆ ರಾಜಾ ಅವರ ಹೇಳಿಕೆಯನ್ನು ಅಲ್ಲಗಳೆದಿರುವ ಆಶೀರ್ವಾದಂ, `ನಾನು ಸುಳ್ಳು ಸಾಕ್ಷಿ ಹೇಳಿದ್ದೇನೆ ಎಂದು ಆರೋಪ ಹೊರಿಸುವುದು ಸರಿಯಲ್ಲ~ ಎಂದು ಸಮರ್ಥಿಸಿಕೊಂಡಿದ್ದಾರೆ.

`ರಾಜಾ ನಿಮ್ಮನ್ನು ರಾಜಕೀಯ ಸೇರಲು ಬೆಂಬಲಿಸಿಲ್ಲ ಎನ್ನುವ ಕಾರಣಕ್ಕೆ ನೀವು ಈ ಪ್ರಕರಣದಲ್ಲಿ ಅವರ ವಿರುದ್ಧ ಸುಳ್ಳು ಸಾಕ್ಷಿ ಹೇಳಿದ್ದೀರಿ~ ಎಂದು ರಾಜಾ ಪರ ವಕೀಲ ಸುಶೀಲ್ ಕುಮಾರ್, ಪಾಟೀ ಸವಾಲಿನ ವೇಳೆ ಆಚಾರ್ಯ ಅವರನ್ನು ತರಾಟೆಗೆ ತೆಗೆದುಕೊಂಡರು.

 `ಒತ್ತಡದ ಮೇಲೆ ನೀವು ಸಿಬಿಐ ಸಾಕ್ಷಿಯಾಗಿದ್ದೀರಿ ಮತ್ತು ನಿಮ್ಮನ್ನು ಈ ಪ್ರಕರಣದಲ್ಲಿ ಆರೋಪಿಯನ್ನಾಗಿ ಮಾಡಲಾಗುತ್ತದೆ~ ಎಂದು ಕುಮಾರ್ ವಾದಿಸಿದರು. `ರಾಜಾ ಅವರ ಮೇಲಿನ ಅಸಮಾಧಾನದಿಂದ ನಾನು ಅವರ ವಿರುದ್ಧ ಸುಳ್ಳು ಸಾಕ್ಷಿ ಹೇಳಿದ್ದೇನೆ ಎನ್ನುವುದು ಖಂಡಿತವಾಗಿಯೂ ಸರಿಯಲ್ಲ~ ಎಂದು ಆಚಾರ್ಯ ಪ್ರತಿಕ್ರಿಯಿಸಿದರು.

 ತಮ್ಮ ರಾಜಕೀಯ ಮಹತ್ವಾಕಾಂಕ್ಷೆಗೆ ಸಂಬಂಧಿಸಿದಂತೆ ಪ್ರತಿವಾದಿ ಪರ ವಕೀಲರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಆಚಾರ್ಯ, `2009ರ ಮಹಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಪಡೆಯಲು ಸಹಾಯ ಪಡೆಯುವುದಕ್ಕೆ ರಾಜಾ ಅವರನ್ನು ನಾನು ಸಂಪರ್ಕಿಸಿಲ್ಲ~ ಎಂದರು.
 
ಕಾಂಗ್ರೆಸ್ ಟಿಕೆಟ್ ಪಡೆಯಲು ರಾಜಾ ಸಹಾಯ ಮಾಡಿಲ್ಲ ಎನ್ನುವುದಕ್ಕೆ ತಾವು ಅವರನ್ನು ತೊರೆಯಲು ನಿರ್ಧರಿಸಿದ್ದಾಗಿ ಪ್ರತಿವಾದಿ ಪರ ವಕೀಲರು ಮಂಡಿಸಿದ ವಾದವನ್ನು ಆಚಾರ್ಯ ಸಾರಾಸಗಟಾಗಿ ತಳ್ಳಿಹಾಕಿದರು.

 `2ಜಿ ಪ್ರಕರಣಕ್ಕೆ ಸಂಬಂಧಿಸಿದಂತೆ 2009ರಲ್ಲಿ ನಾನು ಸಿಬಿಐ ಮೂಲವಾದೆ ಎನ್ನುವುದು ಸುಳ್ಳು ಹೇಳಿಕೆ. ಈ ಪ್ರಕರಣದಲ್ಲಿ ಸಿಬಿಐ ಎಫ್‌ಐಆರ್ ದಾಖಲಿಸಿದ್ದೂ ನನಗೆ ಗೊತ್ತಿರಲಿಲ್ಲ. ಎಫ್‌ಐಆರ್ ದಾಖಲಿಸಿದ ದಿನದಿಂದ ನನ್ನನ್ನು ಸಿಬಿಐ ಪ್ರಶ್ನೆಗೊಳಪಡಿಸುತ್ತಿದೆ. ಇದಕ್ಕೂ ಮುನ್ನ ನಾನು ಸಿಬಿಐ ಜತೆ ಸಂಪರ್ಕ ಇಟ್ಟುಕೊಂಡಿರಲಿಲ್ಲ~ ಎಂದು ಹೇಳಿದರು.  ಆಚಾರ್ಯ ವಿಚಾರಣೆ ಮಂಗಳವಾರ ಕೂಡ ಮುಂದುವರಿಯಲಿದೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT