ನವದೆಹಲಿ, (ಪಿಟಿಐ):  ಮಾಹಿತಿ ಹಕ್ಕು ಕಾಯಿದೆಯನ್ನು ದುರ್ಬಲಗೊಳಿಸುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಪ್ರಧಾನಿ ಮನಮೋಹನ್ ಸಿಂಗ್ ಅವರು, ಮಾಹಿತಿ ಹಕ್ಕು ಕಾಯಿದೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮಾಡಲು ಸರ್ಕಾರ ಆಸಕ್ತಿ ಹೊಂದಿದೆ, ಆದರೆ ಕೆಲವು ಸಂಗತಿಗಳಲ್ಲಿ ಪಾರದರ್ಶಕತೆ ಮತ್ತು ವಿಮರ್ಶೆ ಅಗತ್ಯ ಎಂದು ಪ್ರತಿಪಾದಿಸಿದ್ದಾರೆ.

ಶುಕ್ರವಾರ ಇಲ್ಲಿ ಏರ್ಪಡಿಸಿದ್ದ ಕೇಂದ್ರ ಮಾಹಿತಿ ಹಕ್ಕು ಆಯುಕ್ತರ ಎರಡು ದಿನಗಳ ಸಮಾವೇಶವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ~ಮಾಹಿತಿ ಹಕ್ಕು ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಗೆ ಬರಬೇಕು, ಜೊತೆಗೆ ಪಾರದರ್ಶಕತೆ ಇರಬೇಕು. ಅಲ್ಲದೇ ಉತ್ತರದಾಯಿತ್ವವನ್ನೂ ಹೊಂದಿರಬೇಕು~ ಎಂದು ಅವರು ಹೇಳಿದರು.

~ಪಾರದರ್ಶಕವಾದ ಈ ಕಾನೂನು ಸರ್ಕಾರದ ಕಾರ್ಯವಿಧಾನಕ್ಕೆ ಅಡ್ಡಿಯಾಗಬಾರದು, ಜೊತೆಗೆ ಪ್ರಾಮಾಣಿಕ ಅಧಿಕಾರಿಗಳ ಉತ್ಸಾಹವನ್ನು ಕುಂದಿಸುವಂತಾಗಬಾರದು~ ಎಂದು ಅವರು ತಮ್ಮ ಆತಂಕ ವ್ಯಕ್ತಪಡಿಸಿದರು.

~ಮಾಹಿತಿ ಬಹಿರಂಗ ಮತ್ತು ನಿಗದಿತ ಸಂಪನ್ಮೂಲ ಮತ್ತು ಸಮಯದ ಅಭಾವ ಎದುರಿಸುತ್ತಿರುವ ಸರ್ಕಾರಿ ಉದ್ಯೋಗಿಗಳ ನಡುವೆ ಸಮತೋಲನ ಸಾಧಿಸುವುದು ತುರ್ತು ಅಗತ್ಯವಾಗಿದೆ~ ಎಂದು ಅವರು ನುಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.