ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಶಿಕ್ಷಣ ಆಯೋಗ ರಚನೆಗೆ ಸಲಹೆ

ಉನ್ನತ ಶಿಕ್ಷಣ– ನಿಯಂತ್ರಣ ವ್ಯವಸ್ಥೆ ಇರಲಿ: ಶಿಕ್ಷಣ ನೀತಿಯಲ್ಲಿ ಉಲ್ಲೇಖ
Last Updated 10 ಜೂನ್ 2019, 20:15 IST
ಅಕ್ಷರ ಗಾತ್ರ

ಬೆಂಗಳೂರು: ಶಿಕ್ಷಣದ ಕನಸಿಗೆ ಒಬ್ಬ ಯಜಮಾನ ಬೇಕೇ ಬೇಕು. ಅದಕ್ಕಾಗಿ ದೇಶದ ಮಟ್ಟದಲ್ಲಿ ರಾಷ್ಟ್ರೀಯ ಶಿಕ್ಷಣ ಆಯೋಗ ರಚಿಸಬೇಕು ಎಂದು ರಾಷ್ಟ್ರೀಯ ಶಿಕ್ಷಣ ನೀತಿ ಪ್ರತಿಪಾದಿಸಿದೆ.

ಶಿಕ್ಷಣದ ಎಲ್ಲಾ ಹಂತಗಳು, ಎಲ್ಲಾ ಅಂಶಗಳ ಬಗ್ಗೆ ದೂರದೃಷ್ಟಿ ಇಟ್ಟುಕೊಂಡ ಯಜಮಾನನೇ ಈ ಆಯೋಗ. ಇದು ಶಿಕ್ಷಣ ಇಲಾಖೆಗೆ ಸೀಮಿತ ಆಗಬಾರದು, ಅದು ದೇಶದ ಆಸ್ತಿ ಆಗಬೇಕು. ಇಡೀ ದೇಶದ ಚುಕ್ಕಾಣಿ ಹಿಡಿದವರೇ ಇದರ ಮುಖ್ಯಸ್ಥರಾಗಬೇಕು. ಹಲವು ಇಲಾಖೆಗಳ ಸಹಯೋಗ ಇರಬೇಕು. ರಾಜ್ಯದಲ್ಲೂ ಮುಖ್ಯಮಂತ್ರಿ ನೇತೃತ್ವದಲ್ಲಿರಾಜ್ಯ ಶಿಕ್ಷಣ ಆಯೋಗ ರಚಿಸಬಹುದು ಎಂದು ಶಿಫಾರಸು ಮಾಡಲಾಗಿದೆ.

ಶಿಕ್ಷಣ ಕ್ಷೇತ್ರದ ಸಮಗ್ರ ಸುಧಾರಣೆ ಗಳಿಗೆ ಸೂಕ್ತ ಸಂಪನ್ಮೂಲ ಬೇಕು. ಅದಕ್ಕಾಗಿಯೇ ಶಿಕ್ಷಣ ನೀತಿಯಲ್ಲಿ ಒಂದು ಅಧ್ಯಾಯ ಇದೆ. ಸಂಪನ್ಮೂಲ ಎಷ್ಟು ಕೊಡಬೇಕು ಎಂದರೆ ಈಗಿನ ಜಿಡಿಪಿ ಲೆಕ್ಕದಲ್ಲಿ ಅಲ್ಲ. ಬದಲಿಗೆ ವಾರ್ಷಿಕ ಖರ್ಚಿನಲ್ಲಿ ಎಷ್ಟು ಪ್ರತಿಶತ ಕೊಡುತ್ತೀರಿ ಎಂಬುದು ಮುಖ್ಯವಾಗುತ್ತದೆ. ಒಟ್ಟು ಖರ್ಚಿನ ಶೇ 20ರಷ್ಟನ್ನುಶಿಕ್ಷಣ ಕ್ಷೇತ್ರಕ್ಕೆ ಕೊಡಬೇಕು. ಸದ್ಯಅಂದಾಜು ಶೇ 10ರಿಂದ 11ರಷ್ಟು ನೀಡಲಾಗುತ್ತಿದೆ.

ಪ್ರತಿ ವರ್ಷ ಶೇ 1ರಷ್ಟು ಹೆಚ್ಚಳ ಮಾಡಿಕೊಂಡು ಹೋದರೆ 10 ವರ್ಷದಲ್ಲೇ ಈ ಗುರಿ ಸಾಧಿಸುವುದು ಸಾಧ್ಯವಿದೆ ಎಂದು ತಿಳಿಸಲಾಗಿದೆ.

ನಮ್ಮ ದೇಶದಲ್ಲಿ 170 ವರ್ಷಗಳಿಂದ ಬ್ರಿಟಿಷ್ ವಸಾಹತು ರೂಪದ ಶಿಕ್ಷಣ ವ್ಯವಸ್ಥೆ ನಡೆದು ಬರುತ್ತಿತ್ತು. ಭಾರತದ ದೇಶೀಯವಾದ ಹಾಗೂ ನೈಜ ವಿಚಾರದ ಆಧಾರದಲ್ಲಿ ನಮ್ಮ ಶಿಕ್ಷಣ ಕಟ್ಟಬೇಕು ಎಂಬ ನೆಲೆಯಲ್ಲಿ, ನಮ್ಮ ಸವಾಲುಗಳ ಆಧಾರದ ಮೇಲೆ, ಭಾರತದ ಆತ್ಮದ ಆಧಾರದಲ್ಲಿಶಿಕ್ಷಣ ವ್ಯವಸ್ಥೆ ರೂಪುಗೊಳ್ಳಬೇಕು. ಶಿಕ್ಷಣಬರೀ ಸರ್ಕಾರದ ನಿಲುವಿನ ಮೇಲೆ ರೂ‍ಪುಗೊಂಡ ವಿಚಾರವಾಗಿರಬಾರದು, ಅದು ಸಮಾಜ ಆಸಕ್ತಿಯ ಆಧಾರದಲ್ಲಿ ನಿರ್ಮಾಣವಾಗಬೇಕು ಎಂಬ ಆಶಯವನ್ನು ರಾಷ್ಟ್ರೀಯ ಶಿಕ್ಷಣ ನೀತಿ ಇಟ್ಟುಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT