351 ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾದ ಪ್ರಾಥಮಿಕ ಪರೀಕ್ಷೆಯಲ್ಲಿ 2.73 ಲಕ್ಷ ಮಂದಿ ಆಯ್ಕೆಯಾಗಿದ್ದರು. ಆಯ್ಕೆಯಾದ ಆಭ್ಯರ್ಥಿಗಳಿಗೆ 2017 ಜನವರಿಯಲ್ಲಿ ಎರಡನೇ ಹಂತದ ಪರೀಕ್ಷೆಯನ್ನೂ ನಡೆಸಲಾಗಿತ್ತು. ಸದ್ಯ 45ಸಾವಿರ ಅಭ್ಯರ್ಥಿಗಳು ಅಂತಿಮ ಪರೀಕ್ಷೆಗೆ ಆಯ್ಕೆಯಾಗಿದ್ದು, ಅವರಿಗೆ ದೈಹಿಕ ಹಾಗೂ ತಾಂತ್ರಿಕ ಕೌಶಲ ಪರೀಕ್ಷೆಯನ್ನು ಜೂನ್ 29, 30ರಂದು ನಡೆಸಲಾಗಿದೆ’ ಎಂದು ರೈಲ್ವೆ ಸಚಿವಾಲಯದ ಉನ್ನತ ಮೂಲಗಳಿಂದ ತಿಳಿದುಬಂದಿದೆ.