ಪ್ರಕರಣಕ್ಕೆ ಸಂಬಂಧಿಸಿ ದಿಲೀಪ್ ಅವರನ್ನು ಜುಲೈ 10ರಂದು ಬಂಧಿಸಲಾಗಿತ್ತು. ಅವರ ಪೊಲೀಸ್ ಕಸ್ಟಡಿ ಶನಿವಾರ ಸಂಜೆ 5 ಗಂಟೆಗೆ ಕೊನೆಗೊಳ್ಳಲಿತ್ತು. ಹೀಗಾಗಿ ಅವರನ್ನು ಶನಿವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಈ ವೇಳೆ, ಅವರಿಗೆ ಜಾಮೀನು ನೀಡಲು ನ್ಯಾಯಾಲಯ ನಿರಾಕರಿಸಿದೆ. ನಂತರ ಅವರನ್ನು ಅಲುವ ಉಪ ಕಾರಾಗೃಹಕ್ಕೆ ಕರೆದೊಯ್ಯಲಾಗಿದೆ.