ಚೆನ್ನೈ (ಪಿಟಿಐ): ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಂತಕರನ್ನು ಬಿಡುಗಡೆ ಮಾಡುವ ತಮಿಳುನಾಡು ಸರ್ಕಾರದ ನಿರ್ಧಾರಕ್ಕೆ ಸುಪ್ರೀಂಕೊರ್ಟ್ ಗುರುವಾರ ತಡೆಯಾಜ್ಞೆ ನೀಡಿದ ಬೆನ್ನಲ್ಲೇ ವೆಲ್ಲೂರು ಜೈಲಿನಲ್ಲಿ ನಿರಾಸೆಯ ಕಾರ್ಮೋಡ ಕವಿದಿದೆ.

ರಾಜೀವ್ ಹತ್ಯೆ ಪ್ರಕರಣದಲ್ಲಿ 23 ವರ್ಷ ಜೈಲಿನಲ್ಲಿ ಕಳೆದ ನಂತರ ಇದೀಗ ಬಿಡುಗಡೆಗಾಗಿ ಎದುರು ನೋಡುತ್ತಿದ್ದ ಶಾಂತನ್, ಮುರುಗನ್ ಮತ್ತು ಪೇರರಿವಾಳನ್ ಕನಸು ಭಗ್ನವಾಗಿದೆ.

ರಾಜೀವ್ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ ಎಲ್ಲ ಏಳು ಜನರನ್ನು ಮೂರು ದಿನಗಳ ಒಳಗಾಗಿ ಬಿಡುಗಡೆ ಮಾಡುವುದಾಗಿ ಮುಖ್ಯಮಂತ್ರಿ ಜೆ. ಜಯಲಲಿತಾ ಬುಧವಾರ ಸದನದಲ್ಲಿ ಪ್ರಕಟಿಸಿದ ನಂತರ ಹಂತಕರು ಮತ್ತು ಅವರ ಸಂಬಂಧಿಕರಲ್ಲಿ ಆಸೆಗಳು ಗರಿಗೆದರಿದ್ದವು.
ಆದರೆ, ಅದಾದ 24 ಗಂಟೆಗಳ ಒಳಗಾಗಿ ಹೊರಬಿದ್ದ ಸುಪ್ರೀಂಕೋರ್ಟ್‌ನ ಈ ಆದೇಶ ಮೂವರು ಹಂತಕರು ಮತ್ತು ಅವರ ಸಂಬಂಧಿಗಳ ಆಸೆಗೆ ತಣ್ಣೀರು ಎರೆಚಿದೆ.

ಈ ನಡುವೆ ಜಯಲಲಿತಾ ಸರ್ಕಾರದ ವಿರುದ್ಧ ಹರಿಹಾಯ್ದಿರುವ ಡಿಎಂಕೆ ನಾಯಕ ಎಂ.ಕರುಣಾನಿಧಿ, ಪ್ರಕರಣವನ್ನು ಸಮರ್ಪಕವಾಗಿ ನಿಭಾಯಿಸುವಲ್ಲಿ ಎಐಎಡಿಎಂಕೆ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.

*ನಾವು ತಮಿಳರಲ್ಲವೇ?: ಸಂತ್ರಸ್ತರ ಕುಟುಂಬದ ಪ್ರಶ್ನೆ

*ಸಮಾಲೋಚನೆ ಕಡ್ಡಾಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.