ಪಣಜಿ (ಐಎಎನ್‌ಎಸ್): `ವೋಟಿಗಾಗಿ ನೋಟು ಹಗರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿರುವ ಬಿಜೆಪಿ ಮತ್ತು ಇತರ ಸಂಸತ್ ಸದಸ್ಯರಿಗೆ ಪದ್ಮ ಪ್ರಶಸ್ತಿ ನೀಡಬೇಕಿತ್ತು~ ಎಂದು ಬಿಜೆಪಿಯ ಹಿರಿಯ ಮುಖಂಡ ವೆಂಕಯ್ಯ ನಾಯ್ಡು ಶುಕ್ರವಾರ ಹೇಳಿದ್ದಾರೆ.

ಗೋವಾದಲ್ಲಿ ಎಲ್.ಕೆ ಅಡ್ವಾಣಿ ಅವರ ರಥ ಯಾತ್ರೆಯು ಹಾದುಹೋಗಲಿರುವ ಹಿನ್ನೆಲೆಯಲ್ಲಿ ಸಿದ್ಧತೆಯ ಮೇಲ್ವಿಚಾರಣೆ ನೋಡಿಕೊಳ್ಳಲು ಪಣಜಿಯಲ್ಲಿರುವ ಬಿಜೆಪಿ ಮಾಜಿ ಅಧ್ಯಕ್ಷ ವೆಂಕಯ್ಯ ನಾಯ್ಡು, `ಈ ಹಗರಣದಿಂದ ಲಾಭ ಪಡೆದಿರುವವರನ್ನು ಗುರಿಯಾಗಿಸುವುದನ್ನು ಬಿಟ್ಟು, ಕೇಂದ್ರ ಸರ್ಕಾರವು ಆಡಳಿತ ಯಂತ್ರವನ್ನು ಬಳಸಿಕೊಂಡು ಹಗರಣವನ್ನು ಬಯಲು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುತ್ತಿದೆ~ ಎಂದು ಕಿಡಿ ಕಾರಿದರು.
`ಸರ್ಕಾರವನ್ನು ಉಳಿಸಿಕೊಳ್ಳುವುದಕ್ಕಾಗಿ ಯುಪಿಎ ಲಂಚ ಸಂಸದರಿಗೆ ಲಂಚ ನೀಡಿತ್ತು. ಈ ವಂಚನೆಯನ್ನು ಬಯಲಿಗೆಳೆದ ಅವರಿಗೆ ಪದ್ಮ ಪ್ರಶಸ್ತಿ ನೀಡಬೇಕಿತ್ತು~ ಎಂದು ಹೇಳಿದರು.

`ದುಡ್ಡನ್ನು ಸಂಸತ್‌ಗೆ ತಂದು ಹಗರಣ ಬಯಲು ಮಾಡಿದ್ದಕ್ಕೆ ನಮ್ಮ ಸಂಸದರನ್ನು ಅಭಿನಂದಿಸಬೇಕಿತ್ತು. ಬದಲಿಗೆ ಅವರು ಸಂಸತ್‌ಗೆ ಕಳಂಕ ತಂದರು ಎನ್ನಲಾಯಿತು~ ಎಂದು ನಾಯ್ಡು ದೂರಿದರು.

ಈ ಪ್ರಕರಣದಲ್ಲಿ ವಿರೋಧ ಪಕ್ಷಗಳನ್ನು ಗುರಿಯಾಗಿಸಲು ಕೇಂದ್ರವು ದೆಹಲಿ ಪೊಲೀಸರನ್ನು ತನಗೆ ಬೇಕಾದಂತೆ ಬಳಸಿಕೊಳ್ಳುತ್ತಿದೆ ಎಂದೂ ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.