ಶಿಲ್ಲಾಂಗ್ (ಪಿಟಿಐ): ಲೋಕಸಭೆಯ ಮಾಜಿ ಅಧ್ಯಕ್ಷ ಪಿ.ಎ.ಸಂಗ್ಮಾ ಅವರ ಮೊಬೈಲ್ ನಂಬರ್ ಬಳಸಿ ವ್ಯಕ್ತಿಯೊಬ್ಬ ಬ್ಯಾಂಕ್ ಉದ್ಯೋಗಿಯೊಬ್ಬನಿಂದ ಹಣ ಪಡೆದು ವಂಚಿಸಿದ ಪ್ರಕರಣ ಮೇಘಾಲಯದ ವೆಸ್ಟ್ ಗಾರೊ ಹಿಲ್ಸ್ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೇಘಾಲಯ ಅಪೆಕ್ಸ್ ಸಹಕಾರಿ ಬ್ಯಾಂಕ್ ನ ತಾರಾ ಶಾಖೆಯ ಉದ್ಯೋಗಿ ಶ್ಯಾಂಗಥೊ ಸಲ್ಗಿರಿಯಾ ಡಿ ಸಂಗ್ಮಾ, ಎಂಬವರಿಗೆ ಕರೆ ಮಾಡಿದ ವ್ಯಕ್ತಿ, ಸದ್ಯ ತಾರಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಶಾಸಕ ಪಿ.ಎ.ಸಂಗ್ಮಾ ಅವರ ಮೊಬೈಲ್ ನಂಬರ್ ಬಳಸಿ 25,000 ರೂ ದೋಚಿದ್ದಾನೆ ಎಂದು ಸಂಗ್ಮಾ ಅವರ ಕಾರ್ಯದರ್ಶಿ ಶನಿವಾರ ಪೊಲೀಸರಿಗೆ ದೂರು ನೀಡಿದ್ದಾರೆ.