ನವದೆಹಲಿ: ಪ್ರಾಪ್ತ ವಯಸ್ಸಿನ ಗಂಡು, ಹೆಣ್ಣು ವಿವಾಹ ಆಗದಿದ್ದರೂ ಸಹಬಾಳ್ವೆ ನಡೆಸಬಹುದು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.

ಗಂಡು, ಹೆಣ್ಣಿನ ಒಪ್ಪಿತ ಸಹಜೀವನಕ್ಕೆ ಕಾನೂನು ಕೂಡ ಸಮ್ಮತಿ ನೀಡಿದೆ ಎಂದು ನ್ಯಾಯಮೂರ್ತಿಗಳಾದ ಎ.ಕೆ. ಸಿಕ್ರಿ ಮತ್ತು ಅಶೋಕ್ ಭೂಷಣ್ ಅವರನ್ನು ಒಳಗೊಂಡ ದ್ವಿಸದಸ್ಯ ಪೀಠ ಹೇಳಿದೆ.

ಕಾನೂನು ಪ್ರಕಾರ ಇನ್ನೂ ಮದುವೆಯ ವಯಸ್ಸು ಆಗಿಲ್ಲ ಎಂಬ ಕಾರಣ ನೀಡಿ ಮದುವೆ ರದ್ದುಗೊಳಿಸಿದ್ದ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಕೇರಳದ ನಂದಕುಮಾರ್ ಎಂಬುವರು ಮೇಲ್ಮನವಿ ಸಲ್ಲಿಸಿದ್ದರು.

ಮದುವೆ ವೇಳೆ ನಂದಕುಮಾರ್‌ಗೆ ಇನ್ನೂ 21 ವರ್ಷ ವಯಸ್ಸಾಗಿಲ್ಲ ಎಂಬ ಕಾರಣದಿಂದ ಅವರ ಪತ್ನಿ ತುಷಾರಾ ಅವರನ್ನು ಪೋಷಕರಿಗೆ ವಶಕ್ಕೆ ಒಪ್ಪಿಸುವಂತೆ ಕೇರಳ ಹೈಕೋರ್ಟ್ ನಿರ್ದೇಶನ ನೀಡಿತ್ತು.

ಹೈಕೋರ್ಟ್ ತೀರ್ಪು ತಳ್ಳಿ ಹಾಕಿದ ಸುಪ್ರೀಂ ಕೋರ್ಟ್ ದ್ವಿಸದಸ್ಯ ಪೀಠ, ನಂದಕುಮಾರ್ ಮತ್ತು ತುಷಾರಾ ಇಬ್ಬರೂ ಪ್ರಾಪ್ತ ವಯಸ್ಸಿನವರಾಗಿದ್ದು, ಈ ಮದುವೆ ರದ್ದು ಮಾಡಲು ಸಾಧ್ಯವಿಲ್ಲ ಎಂದು ಹೇಳಿದೆ.

ಮದುವೆಯಾಗದಿದ್ದರೂ ಈ ಇಬ್ಬರೂ ಸಹಜೀವನ ನಡೆಸಲು ಕಾನೂನು ಅಡ್ಡಿಯಾಗದು. ತಮಗೆ ಇಷ್ಟವಾದ ವ್ಯಕ್ತಿ ಜತೆಗೆ ಜೀವಿಸುವ ಹಕ್ಕು ತುಷಾರಾ ಅವರಿಗಿದೆ ಎಂದು ಪೀಠ ಸ್ಪಷ್ಟವಾಗಿ ಹೇಳಿದೆ.

ಕೇರಳದ ಹಾದಿಯಾ ಮತ್ತು ಶಫಿನ್ ಜಹಾನ್ ಪ್ರಕರಣವನ್ನು ಕೂಡ ಪೀಠ ಈ ಸಂದರ್ಭದಲ್ಲಿ ಉಲ್ಲೇಖಿಸಿದೆ.

ಪ್ರಾಪ್ತ ವಯಸ್ಸಿನ ಗಂಡು, ಹೆಣ್ಣಿನ ನಡುವಣ ಒಪ್ಪಿತ ಮದುವೆಯಲ್ಲಿ ನ್ಯಾಯಾಲಯ ಮಧ್ಯೆ ಪ್ರವೇಶಿಸುವುದು ಸಾಧುವಲ್ಲ. ಅಂತಹ ಮದುವೆ ರದ್ದು ಮಾಡುವುದು ನ್ಯಾಯಸಮ್ಮತವಲ್ಲ ಎಂದು ಅಭಿಪ್ರಾಯಪಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.