ಚೆನ್ನೈ: ಕೇಂದ್ರ ಸರ್ಕಾರವು ಕಾವೇರಿ ನಿರ್ವಹಣಾ ಮಂಡಳಿ ರಚಿಸಬೇಕು ಎಂದು ಆಗ್ರಹಿಸಿ ನಡೆಸಲಾದ ಮೌನ ಪ್ರತಿಭಟನೆಯಲ್ಲಿ ತಮಿಳು ನಟರಾದ ರಜನಿಕಾಂತ್, ಕಮಲ್ ಹಾಸನ್, ವಿಜಯ್ ಹಾಗೂ ಇತರರು ಪಾಲ್ಗೊಂಡಿದ್ದರು.

ತಮಿಳು ಚಲನಚಿತ್ರ ನಿರ್ಮಾಪಕರ ಮಂಡಳಿ (ಟಿಎಫ್‌ಪಿಸಿ), ದಕ್ಷಿಣ ಭಾರತ ಕಲಾವಿದರ ಸಂಘ (ಎಸ್‌ಐಎಎ), ದಕ್ಷಿಣ ಭಾರತ ಚಲನಚಿತ್ರ ಉದ್ಯೋಗಿಗಳ ಒಕ್ಕೂಟ (ಎಫ್‌ಇಎಫ್‌ಎಸ್‌ಐ) ಹಾಗೂ ಹಂಚಿಕೆದಾರರ ಸಂಘ ವಳ್ಳುವರ್ ಕೊಟ್ಟಂನಲ್ಲಿ ಮೌನ ಪ್ರತಿಭಟನೆ ನಡೆಸಿತು.

ತೂತುಕುಡಿಯಲ್ಲಿನ ತಾಮ್ರದ ಘಟಕ ಮುಚ್ಚಬೇಕೆಂದೂ ಪ್ರತಿಭಟನೆಯಲ್ಲಿ ಆಗ್ರಹಿಸಲಾಯಿತು. ಆರೋಗ್ಯಕ್ಕೆ ಹಾನಿ ಉಂಟಾಗುತ್ತಿದೆ ಎನ್ನುವ ಕಾರಣಕ್ಕಾಗಿ ಈ ಘಟಕ ಮುಚ್ಚಬೇಕೆಂದು ಸ್ಥಳೀಯರು ಹಿಂದಿನಿಂದಲೂ ಪ್ರತಿಭಟನೆ ನಡೆಸುತ್ತಿದ್ದಾರೆ.

ಸಂಚಾರ ಅಸ್ತವ್ಯಸ್ತ

ಹನೂರು (ಚಾಮರಾಜನಗರ): ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆ ಮಾಡುವಂತೆ ಒತ್ತಾಯಿಸಿ ಭಾನುವಾರ ತಮಿಳುನಾಡಿನ ಗೋವಿಂದಪಾಡಿಯಲ್ಲಿ ನಡೆದ ಪ್ರತಿಭಟನೆಯಿಂದ ಚಾಮರಾಜನಗರ ಮತ್ತು ತಮಿಳುನಾಡು ಮಧ್ಯೆ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.