ನವದೆಹಲಿ: 70 ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪುಕೋಟೆಯಲ್ಲಿ ಧ್ವಜಾರೋಹಣ ಮಾಡಿ ಜನತೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಭಾರತವನ್ನು ಸ್ವರಾಜ್ಯದಿಂದ ಸುರಾಜ್ಯ (ಉತ್ತಮ ಆಡಳಿತ)ದತ್ತ ಕೊಂಡೊಯ್ಯಲು ನಾನು ಬಯಸುತ್ತೇನೆ ಎಂದು ಹೇಳಿದ್ದಾರೆ.
ಸುಧಾರಣೆ, ನಿರ್ವಹಣೆ ಮತ್ತು ಪರಿವರ್ತನೆ ಎಂಬ ಕೇಂದ್ರ ಸರಕಾರದ ಧ್ಯೇಯೋದ್ದೇಶವನ್ನು ಪುನರುಚ್ಛರಿಸಿದ ಮೋದಿ, ತಮ್ಮ ಭಾಷಣದಲ್ಲಿ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಭಯೋತ್ಪಾದನೆಗೆ ಭಾರತ ಮಣಿಯುವುದಿಲ್ಲ. ಪಾಕಿಸ್ತಾನದ ಉಗ್ರವಾದವನ್ನು ನಾವೆಂದೂ ಸಹಿಸಿಕೊಳ್ಳುವುದಿಲ್ಲ. ಇದಕ್ಕೆ ತಕ್ಕ ಉತ್ತರವನ್ನು ನಾವು ನೀಡುತ್ತೇವೆ ಎಂದು ಮೋದಿ ಘರ್ಜಿಸಿದ್ದಾರೆ.

ಮೋದಿ ಭಾಷಣದ ಮುಖ್ಯಾಂಶಗಳು

1 ಒಬ್ಬ ರಾಜಕೀಯ ನಾಯಕನ ರೀತಿಯಿಂದ ಭಿನ್ನವಾಗಿ ಸುಧಾರಣೆ, ನಿರ್ವಹಣೆ ಮತ್ತು ಪರಿವರ್ತನೆ ಈ ಧ್ಯೇಯವನ್ನು ಮೈಗೂಡಿಸಿಕೊಳ್ಳಲು ನಾನು ಪ್ರಯತ್ನಿಸಿದ್ದೇನೆ.

2. ಈ ಸ್ವರಾಜ್ಯವನ್ನು ಸುರಾಜ್ಯವನ್ನಾಗಿ ಮಾಡುವ ಹೊಣೆ ಭಾರತದ 125 ಕೋಟಿ ಜನರ ಮೇಲಿದೆ. ಸಂಸತ್ನಿಂದ ಪಂಚಾಯತ್ಗಳ ವರೆಗೆ, ಗ್ರಾಮ್ ಪ್ರಧಾನ್ಗಳಿಂದ ಪ್ರಧಾನಿಯವರೆಗೆ ಎಲ್ಲರೂ ತಮ್ಮ ಕರ್ತವ್ಯವನ್ನು ಪರಿಪಾಲನೆ ಮಾಡಬೇಕಾಗಿದೆ. ಹಾಗಾದರೆ ಮಾತ್ರ ಸುರಾಜ್ಯದ ಕನಸು ನನಸಾಗುತ್ತದೆ.

3. ಕೆಲವು ದಿನಗಳಿಂದ ಬಲೂಚಿಸ್ತಾನ್, ಗಿಲ್ಗಿಟ್ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಜನರು ನನಗೆ ಧನ್ಯವಾದಗಳನ್ನು ಹೇಳುತ್ತಿದ್ದಾರೆ. ಅವರಿಗೆ ನಾನು ಋಣಿ.

4 . ಸರಕಾರ ಏನೆಲ್ಲಾ ಕೆಲಸ ಮಾಡಿದೆ ಎಂಬುದನ್ನು ಲೆಕ್ಕ ಹಾಕುವುದು ಸುಲಭ. ಆದರೆ ಆ ಕೆಲಸ, ಯೋಜನೆಗಳನ್ನು ಆರಂಭಿಸಬೇಕಾದರೆ ಎಷ್ಟು ಕಷ್ಟವಿದೆ ಎಂಬುದು ತಿಳಿಯಬೇಕು. ಇಂದು ನಾನು 'ಕಾರ್ಯ'ದ ಬದಲು ಸರಕಾರದ ಕಾರ್ಯ ಸಂಕ್ರಾಂತಿ ಬಗ್ಗೆ ಮಾತನಾಡಲು ಇಚ್ಛಿಸುತ್ತೇನೆ.

5. ನಾವು ಹಣದುಬ್ಬರ ದರವನ್ನು ಶೇ, 6ರಿಂದ ಕೆಳಗೆ ತಂದಿದ್ದೇವೆ. ಹಣದುಬ್ಬರದಿಂದಾಗಿ ಬಡವರು ಹಸಿವಿನಿಂದ ಬಳಲಬಾರದು. ಇದಕ್ಕಾಗಿ ನಾನು ನಿರಂತರ ಶ್ರಮ ವಹಿಸುತ್ತೇನೆ ಎಂದು ಭರವಸೆ ನೀಡುತ್ತೇನೆ.

6. ನಮ್ಮ ಸಾಮಾಜಿಕ ಐಕ್ಯತೆ ತುಂಬಾ ಮುಖ್ಯ. ಹೆಸರು ಅಥವಾ ಜಾತಿಯ ಹೆಸರಲ್ಲಿ ಭೇದ ಭಾವ ಸಲ್ಲದು. ಮತಾಂಧತೆ ದೇಶಕ್ಕೆ ಮಾರಕ. ಈ ಎಲ್ಲ ಸಮಸ್ಯೆಗಳನ್ನು ನಾವು ಮೀರಿ ನಿಲ್ಲಬೇಕಾಗಿದೆ.

7. ನಾವೆಲ್ಲರೂ ಸಾಮಾಜಿಕ ಪಿಡುಗು ವಿರುದ್ಧ ಹೋರಾಡುವ ಮೂಲಕ ಸಾಮಾಜಿತ ನ್ಯಾಯಕ್ಕೆ ಬೆಂಬಲ ನೀಡಬೇಕು. ಮಹಾತ್ಮಾ ಗಾಂಧಿ, ಅಂಬೇಡ್ಕರ್ ಅವರಂಥಾ ಮಹಾನ್ ನಾಯಕರು ಸದಾ ಸಾಮಾಜಿಕ ಐಕ್ಯತೆಗೆ ಒತ್ತು ನೀಡಿದ್ದರು.

8. ಜನರು ಕಂದಾಯ ತೆರಿಗೆ ಅಧಿಕಾರಿಗಳ ಬಗ್ಗೆ ಭಯ ಬೀಳುತ್ತಿದ್ದಾರೆ, ಹೆಚ್ಚಾಗಿ ಮಧ್ಯಮ ವರ್ಗ ಕುಟುಂಬಗಳು. ನಾವು ಈ ಪರಿಸ್ಥಿತಿಯನ್ನು ಬದಲಾಯಿಸಬೇಕಾಗಿದೆ, ನಾನು ಇದನ್ನು ಬದಲಿಸುತ್ತೇನೆ. ಈ ಹಿಂದೆ ಪಾಸ್ಪೋರ್ಟ್ ಸಿಗಲು ಒಂದು ತಿಂಗಳು ಕಾಯಬೇಕಾಗಿತ್ತು. ಆದರೆ ಈಗ ಕೆಲವೇ ವಾರಗಳಲ್ಲಿ ಪಾಸ್ಪೋರ್ಟ್ ಕೈ ಸೇರುತ್ತದೆ. ಸುರಾಜ್ಯದಲ್ಲಿ ಪಾರದರ್ಶಕತೆ ಅತೀ ಅಗತ್ಯ.

9. ಅದೊಂದು ಕಾಲವಿತ್ತು, ಸರಕಾರ ಆರೋಪದ ಸುಳಿಯಲ್ಲಿ ಸಿಲುಕಿರುತ್ತಿತ್ತು. ಆದರೆ ಈಗ ಜನರು ಸರಕಾರದ ಮೇಲೆ ನಿರೀಕ್ಷೆಯನ್ನಿಟ್ಟು ಕಾಯುತ್ತಿರುತ್ತಾರೆ.

10.ಸ್ವಾತಂತ್ರ್ಯ ಹೋರಾಟಗಾರರ ನಿವೃತ್ತಿ ವೇತನದಲ್ಲಿ ಶೇ. 20 ಏರಿಕೆ

11. ಬಡಕುಟುಂಬಗಳಿಗೆ ಸಹಾಯವಾಗುವಂತೆ ರು. 1 ಲಕ್ಷದಷ್ಟು ಔಷಧಿ ವೆಚ್ಚವನ್ನು ಭರಿಸುವುದು

ಭಾಷಣದ ವಿಡಿಯೊ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.