ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳ್ಳಿಗಾಡಿನತ್ತ ಜೇಟ್ಲಿ ನೋಟ

Last Updated 28 ಫೆಬ್ರುವರಿ 2015, 19:57 IST
ಅಕ್ಷರ ಗಾತ್ರ

6 ಕೋಟಿ ಶೌಚಾಲಯಗಳ ನಿರ್ಮಾಣ: ಸ್ವಚ್ಛ ಭಾರತ ಅಭಿಯಾನ ಯೋಜನೆ ಅಡಿ ಕೇಂದ್ರವು ದೇಶದಾದ್ಯಂತ 6 ಕೋಟಿ ಶೌಚಾಲಯಗಳನ್ನು ನಿರ್ಮಿಸಲಿದೆ. ಈಗಾಗಲೇ ಸುಮಾರು 50 ಲಕ್ಷ ಶೌಚಾಲಯಗಳನ್ನು ನಿರ್ಮಿಸಲಾಗಿದೆ.

ಗ್ರಾಮೀಣಾಭಿವೃದ್ಧಿ:
ನರೇಗಾಗೆ ರೂ. 34,699 ಕೋಟಿ

* ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಎಂಜಿಎನ್‌ಆರ್ಇಜಿಎ) ಬಗ್ಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಟೀಕೆ ಮಾಡಿದ್ದರೂ, ಈ ಯೋಜನೆಗೆ ಉದಾರವಾಗಿ ಅನುದಾನ ನೀಡಲಾಗಿದೆ. ಈ ಯೋಜನೆಗೆ ರೂ. 34,699 ಕೋಟಿ ಅನುದಾನ ನೀಡಲಾಗಿದೆ. ಅಲ್ಲದೆ ನಿರೀಕ್ಷೆಯಂತೆ ತೆರಿಗೆ ಸಂಗ್ರಹ ವಾದರೆ ಹೆಚ್ಚುವರಿಯಾಗಿ ರೂ. 5000 ಕೋಟಿ ಹಂಚಿಕೆ. ಈ ಬಾರಿಯ ಬಜೆಟ್‌ನಲ್ಲಿ ಗ್ರಾಮೀಣಾಭಿವೃದ್ಧಿಗೆ ಶೇ 12 ರಷ್ಟು ಹೆಚ್ಚಿನ ಅನುದಾನ ಘೋಷಿಸಲಾಗಿದೆ.

ಮಣ್ಣಿನ ಆರೋಗ್ಯ ಕಾರ್ಡ್‌
* ಸಾವಯುವ ಕೃಷಿ ಪದ್ಧತಿ ಪ್ರೋತ್ಸಾಹಿಸುವ ‘ಪರಂಪರಾ ಗತ ಕೃಷಿ ವಿಕಾಸ ಯೋಜನೆ’ಗೆ ಪೂರಕವಾಗಿರುವ ಹಾಗೂ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವ ‘ಮಣ್ಣಿನ ಆರೋಗ್ಯ ಕಾರ್ಡ್‌ ಯೋಜನೆ’ ಜಾರಿ

ಹತ್ತು ಯೋಜನೆಗಳ ವಿಲೀನ
* ರಾಷ್ಟ್ರೀಯ ಆಹಾರ ಭದ್ರತಾ ಮಿಷನ್‌ ಸೇರಿದಂತೆ 10 ಪ್ರಮುಖ ಯೋಜನೆ­ಗಳನ್ನು ವಿಲೀನಗೊಳಿಸಿ ‘ಕೃಷಿಯೋನ್ನತಿ ಯೋಜನೆ’ಯಡಿ ಜಾರಿ.  ಇದಕ್ಕೆ ಕೇಂದ್ರವು ರೂ. 9,000 ಕೋಟಿ ನೀಡಲಿದ್ದು, ಯೋಜನೆ ಜಾರಿಗೊಳಿಸುವ ಹೊಣೆ ರಾಜ್ಯ ಸರ್ಕಾರಗಳದ್ದಾಗಿದೆ.
* ‘ಪ್ರಧಾನಮಂತ್ರಿ ಗ್ರಾಮ ಸಿಂಚಾಯಿ ಯೋಜನೆ’ಯಡಿ ಅತಿ ಸಣ್ಣ ನೀರಾವರಿ ಹಾಗೂ ಜಲಾನಯನ ಅಭಿವೃದ್ಧಿಗಾಗಿ ರೂ. 5,300 ಕೋಟಿ
* ಸಣ್ಣ, ಅತಿ ಸಣ್ಣ ರೈತರಿಗೆ ಸುಲಭವಾಗಿ ಸಾಲ ಒದಗಿಸುವ ದೃಷ್ಟಿಯಿಂದ ‘ರಾಷ್ಟ್ರೀಯ ಗ್ರಾಮೀಣಾಭಿವೃದ್ಧಿ ಬ್ಯಾಂಕ್‌’ನಲ್ಲಿ (ನಬಾರ್ಡ್‌) ‘ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಧಿ’ (ಆರ್‌ಐಡಿಎಫ್‌) ಸ್ಥಾಪಿಸಲು ರೂ. 25,000 ಕೋಟಿ

ಸ್ವಾತಂತ್ರ್ಯದ ಅಮೃತ ಮಹೋತ್ಸವ ‘ಟೀಮ್‌ ಇಂಡಿಯಾ ನೋಟ’
ಭಾರತ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ‘ಟೀಂ ಇಂಡಿಯಾ’ ನೋಟದಡಿ ಅಭಿವೃದ್ಧಿಗೆ ಸಂಬಂಧಿಸಿದ ಹಲವು ಆಶಯಗಳನ್ನು ಬಜೆಟ್‌ನಲ್ಲಿ ಪ್ರಕಟಿಸಲಾಗಿದೆ.

2022ಕ್ಕೆ ಭಾರತವು ಸ್ವಾತಂತ್ರ್ಯ ಪಡೆದು 75 ವರ್ಷವಾಗಲಿದೆ. ರಾಜ್ಯಗಳ ಸಹಕಾರದೊಂದಿಗೆ ಮುಂದಿನ ಏಳು ವರ್ಷಗಳಲ್ಲಿ ಹಲವು ಯೋಜನೆಗಳನ್ನು ಜಾರಿಗೊಳಿಸಲು ಕೇಂದ್ರ ಮುಂದಾಗಿದೆ.

ಕನಿಷ್ಠ ಒಬ್ಬರಿಗಾದರೂ ಉದ್ಯೋಗ
* ಕುಟುಂಬದಲ್ಲಿ ಕನಿಷ್ಠ ಒಬ್ಬರಿಗಾದರೂ ಉದ್ಯೋಗ ಅಥವಾ ಆರ್ಥಿಕ ಸೌಲಭ್ಯಗಳನ್ನು ಕಲ್ಪಿಸುವುದು. ಈ ಮೂಲಕ ಕುಟುಂಬವನ್ನು ಸ್ವಾವಲಂಬಿಯನ್ನಾಗಿ ಮಾಡುವ ಗುರಿ 

ಸರ್ವರಿಗೂ ಸೂರು
* ‘ಎಲ್ಲರಿಗೂ ಸೂರು’ ಘೋಷಣೆಯಡಿ 2022ರ ವೇಳೆಗೆ ನಗರದ ಪ್ರದೇಶದಲ್ಲಿ 2 ಕೋಟಿ ಮತ್ತು ಗ್ರಾಮೀಣ ಭಾಗದಲ್ಲಿ 4 ಕೋಟಿ ಮನೆಗಳ ನಿರ್ಮಾಣ. ಪ್ರತಿಯೊಂದು ಮನೆಗೂ ಶುದ್ಧ ಕುಡಿಯುವ ನೀರು, ವಿದ್ಯುತ್‌ ಮತ್ತು ಶೌಚಾಲಯ ಸೌಲಭ್ಯ

ಬಡತನ ನಿರ್ಮೂಲನೆ
* ಬಡತನ ನಿರ್ಮೂಲನೆ ಮಾಡುವ ಉದ್ದೇಶದಿಂದ ಕೇಂದ್ರದ ಪ್ರತಿಯೊಂದ ಯೋಜನೆಗಳ ಲಾಭ ಬಡವರಿಗೆ ತಲುಪುವಂತೆ ನೋಡಿಕೊಳ್ಳುವುದು

ಗ್ರಾಮೀಣ ರಸ್ತೆ
* ಗ್ರಾಮೀಣ ಮೂಲಸೌಕರ್ಯ ನಿಧಿಗೆ ರೂ. 25 ಸಾವಿರ ಕೋಟಿ ಅನುದಾನ ಹಂಚಿಕೆ. 1,78,000 ಕುಗ್ರಾಮಗಳಿಗೆ ರಸ್ತೆ ಸಂಪರ್ಕ. ಈ ನಿಟ್ಟಿನಲ್ಲಿ ಒಂದು ಲಕ್ಷ ಕಿ.ಮೀ. ರಸ್ತೆ ನಿರ್ಮಾಣ ಕಾರ್ಯ ಆರಂಭವಾಗಿದ್ದು, ಹೆಚ್ಚುವರಿಯಾಗಿ ಇನ್ನೂ ಒಂದು ಲಕ್ಷ ಕಿ.ಮೀ. ರಸ್ತೆ ನಿರ್ಮಿಸಲು ತೀರ್ಮಾನ

20 ಸಾವಿರ ಹಳ್ಳಿಗಳಿಗೆ ವಿದ್ಯುತ್‌
* ಇದುವರೆಗೆ ವಿದ್ಯುತ್‌ ಸಂಪರ್ಕವನ್ನೇ ಕಾಣದ 20 ಸಾವಿರ ಹಳ್ಳಿಗಳಿಗೆ 2020ರ ವೇಳೆಗೆ ವಿದ್ಯುತ್‌ ಸಂಪರ್ಕ. 2022ಕ್ಕೆ ಭಾರತ ಸ್ವಾತಂತ್ರ್ಯ ಗಳಿಸಿ 75 ವರ್ಷ ಪೂರೈಸಲಿದ್ದು, ಆ ವೇಳೆಗೆ ದಿನದ 24 ಗಂಟೆ ವಿದ್ಯುತ್‌ ಪೂರೈಸಲು ತೀರ್ಮಾನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT