ನವದೆಹಲಿ: ಪುಣೆಯ ಕುದುರೆ ತಳಿ ಫಾರಂನ ಮಾಲಿಕ ಹಸನ್ ಅಲಿ ಖಾನ್ ಐದು ವರ್ಷಗಳ ಅವಧಿಯಲ್ಲಿ ತನ್ನ ಆಸ್ತಿಯನ್ನು 1.10 ಲಕ್ಷ ಕೋಟಿ ರೂಪಾಯಿಗಳು ಎಂದು ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಿದ್ದಾನೆ.

ತನ್ನ ಆದಾಯದ ಮೂಲಗಳನ್ನು ವಿವರಿಸಲು ಅಲಿ ವಿಫಲನಾಗಿರುವುದು ಹಾಗೂ ಇತರ ಕಾರಣಗಳು ಸುಪ್ರೀಂ ಕೋರ್ಟ್, ಅಲಿಗೆ ಬಾಂಬೆ ಹೈಕೋರ್ಟ್ ನೀಡಿದ್ದ ಜಾಮೀನನ್ನು ರದ್ದು ಮಾಡಲು ಕಾರಣವಾಗಿವೆ.

ಲಂಡನ್‌ನ ಬರ್‌ಕ್ಲೇ ಬ್ಯಾಂಕ್‌ನಲ್ಲಿ ಏಳು ಲಕ್ಷ ಡಾಲರ್ ಠೇವಣಿ ಇಟ್ಟಿದ್ದ. ಹೈದರಾಬಾದ್‌ನ ನಿಜಾಮರಿಗೆ ಸೇರಿದ್ದು ಎನ್ನಲಾದ ಆಭರಣ ಮಾರಾಟದಿಂದ ಬಂದಿದ್ದ 30 ಸಾವಿರ ಡಾಲರ್ ಕಮಿಷನ್ ಹಣದ ರಸೀತಿ, ವಿದೇಶದ ವಿವಿಧ ಬ್ಯಾಂಕ್ ಖಾತೆಗಳಲ್ಲಿ ವ್ಯವಹಾರ ಮಾಡಿರುವುದು ಸಿಬಿಐ ತನಿಖೆ ಸಂದರ್ಭದಲ್ಲಿ ತಿಳಿದು ಬಂದಿದೆ. ಆದರೆ ಅಲಿ ತನ್ನ ಆದಾಯ ಮೂಲದ ಬಗ್ಗೆ ವಿವರಣೆ ನೀಡುತ್ತಿಲ್ಲ.

ಈ ಎಲ್ಲಾ ಕಾರಣಗಳನ್ನು ಸಿಬಿಐ ಸುಪ್ರೀಂ ಕೋರ್ಟಿನ ಗಮನಕ್ಕೆ ತಂದ ನಂತರ ಆತನ ಜಾಮೀನನ್ನು ವಜಾ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.